ಬೆಳಗಾವಿ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇವರು ಇಂದು (ಶನಿವಾರ )ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ನಡೆಸುತ್ತಿದ್ದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳ ಕೇಂದ್ರಕ್ಕೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗಿಯಾದರು. ಈ ಪರೀಕ್ಷೆ ಕಳೆದ ತಿಂಗಳು ಜುಲೈ ಕೊನೆಯ ವಾರದಲ್ಲಿ ನಡೆಯಬೇಕಿತ್ತು. ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಲಾಗಿತ್ತು.

ಕುಲಪತಿಗಳೊಂದಿಗೆ ವಿವಿಯ ಪರೀಕ್ಷಾ ಸಂಯೋಜಕ ಲವ ಆರ್ ಇದ್ದರು. ಇವರಿಗೆ ಮಹಾವಿದ್ಯಾಲಯದ ಪರೀಕ್ಷಾ ಸಂಯೋಜಕ ಡಾ. ಅರ್ಜುನ ಜಂಬಗಿ ಸಾಥ್ ಕೊಟ್ಟರು. ಪರೀಕ್ಷೆ ಅತ್ಯಂತ ಸುಸೂತ್ರವಾಗಿ ನೆರವೇರಿತು.