Join The Telegram | Join The WhatsApp |
ಬೆಂಗಳೂರು-
ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವ ಹಾಗೂ ಒಂದೇ ಅಡುಗೆ ಮನೆ ಇರುವ ಕಾರಣದಿಂದಾಗಿ ಕರ್ನಾಟಕ ಸರಕಾರದ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಸಮಯವನ್ನು ಬದಲಾಯಿಸಲು ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.
ಮಧ್ಯಾಹ್ನ ಊಟದ ಸಮಯದಲ್ಲಿ ಚಿಕ್ಕ ಮಕ್ಕಳು ದೊಡ್ಡ ಮಕ್ಕಳೊಂದಿಗೆ ಕೂರಿಸುವುದು. ಹಾಗೇ ಮಕ್ಕಳಿಗೆ ಆಹಾರವನ್ನು ಕಡಿಮೆ ಸಮಯದಲ್ಲಿ ಬಡಿಸುವಾಗ ಹಾಗೂ ಮಕ್ಕಳು ತಟ್ಟೆಗಳನ್ನು ತೊಳೆಯುವಾಗ ನೂಕುನುಗ್ಗಲಿಗೆ ಕಾರಣವಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಾಲೆಯ ಮಧ್ಯಾಹ್ನದ ಬಿಸಿಊಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1ರಿಂದ 1.45ರವರೆಗೆ ಹಾಗೂ 6ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2ರಿಂದ 2.40ರವರೆಗೆ ಪ್ರತ್ಯೇಕ ಊಟ ವಿತರಿಸಲು ತಿಳಿಸಲಾಗಿದೆ.
ಇದರ ಬಗ್ಗೆ ಶಾಲಾಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದರು. ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಸಂಶೋಧನಾ ನಿರ್ದೇಶಕನಾಲಯವು ಮಾಡಿದ ವಿವಿಧ ಶಿಫಾರಸುಗಳಲ್ಲಿ ಈ ಅಂಶವನ್ನು ಸೇರಿಸಲಾಗಿದೆ. ಶಾಲೆಗಳ ಮಧ್ಯಾಹ್ನದ ಊಟದ ಗುಣಮಟ್ಟ, ಪ್ರಮಾಣ, ಪೌಷ್ಟಿಕತೆ, ಶುಚಿತ್ವ, ಸುರಕ್ಷತೆ ಮತ್ತು ಕೊರತೆಗಳ ಬಗ್ಗೆ ಗಮನ ಹರಿಸಲು ತಿಳಿಸಲಾಗಿದೆ.
Join The Telegram | Join The WhatsApp |