ಬೆಳಗಾವಿ: ಚನ್ನಮ್ಮನ ಕಿತ್ತೂರು ತಾತ್ಕಾಲಿಕ ಹೆಚ್ಚುವರಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಚನ್ನಬಸಪ್ಪ ವೈ.ತುಬಾಕದ ಅವರನ್ನು ಜಿಪಂ ಸಿಇಒ ರಾಹುಲ್ ಶಿಂಧೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅವರು ಇದುವರೆಗೆ ಬೈಲಹೊಂಗಲ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಚನ್ನಬಸಪ್ಪ ಅವರನ್ನು ಅನುದಾನ ರಹಿತ ಶಿಕ್ಷಕರ ಸಂಘದ ಕಾರ್ಯದರ್ಶಿ, ಮೃತ್ಯುಂಜಯ ಕಲ್ಮಠ, ಸದಸ್ಯರಾದ ರಮೇಶ ಬಸರಕೋಡ, ಶ್ರೀನಿವಾಸ ಭಜಂತ್ರಿ, ಅದೃಶ್ಯ ಗೌಡ ಪಾಟೀಲ, ಅರ್ಜುನ ಕುರಿ ಮುಂತಾದವರು ಸನ್ಮಾನಿಸಿದರು.