ಬೆಳಗಾವಿ :
ಮ.ನ. ರ. ಸಂಘದ ಮಹಾಂತ ಭವನದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಸಂಘದ ಅಡಿಯಲ್ಲಿ
2023 – 24 ನೆಯ ಸಾಲಿನ ವಿಶೇಷ ಸರಣಿ ಉಪನ್ಯಾಸಗಳ ಮಾಲಿಕೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ : ಮಹಿಳಾ ವ್ಯಕ್ತಿತ್ವದ ಚಾರಿತ್ರಿಕ ಅನಾವರಣ ಎಂಬ ವಿಷಯದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಗಜಾನನ ನಾಯ್ಕ ವಿಶೇಷ ಉಪನ್ಯಾಸದಲ್ಲಿ ಸ್ಥಳೀಯ ಇತಿಹಾಸದ ನಾಯಕರನ್ನು ಓದುವ ಬದಲಾಗಿ ಪಠ್ಯದಲ್ಲಿ ವಿದೇಶದ ಇತಿಹಾಸದ ನಾಯಕರನ್ನು ಪಠ್ಯದಲ್ಲಿ ಓದುತ್ತಿರುವುದು ದುರಂತ. ಸರಿಯಾದ ಆಕರಗಳ ಲಭ್ಯತೆ ಮತ್ತು ನಿರೂಪಣಾ ಕ್ರಮ ಸರಿಯಾಗಿಲ್ಲದಿರುವ ಕಾರಣ ಚಾರಿತ್ರಿಕ ನಿಜವಾದ ಸ್ಥಳೀಯ ನಾಯಕರ ಕುರಿತಾದ ಮಾಹಿತಿ ತಡವಾಗಿ ಬೆಳಕಿಗೆ ತರಲಾಗಿದೆ. ರಾಣಿ ಚನ್ನಮ್ಮಗೆ ಸಾಮ್ರಾಜ್ಯ ಶಾಹಿ ಮನೋಭಾವನೆ ಇರಲಿಲ್ಲ. ಸಮಾಧಿಯ ಮೇಲೆ ಭಾರತೀಯ ಹೆಣ್ಣುಮಗಳು ಸಾಮ್ರಾಜ್ಯ ಸ್ಥಾಪನೆ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿಯೇ ಇಲ್ಲ. ಮನೆತನದ ಗೌರವಕ್ಕೆ ಧಕ್ಕೆ , ಸ್ವಾಭಿಮಾನಕ್ಕೆ ಅಪಾಯ ಬಂದಾಗ ಮುಂದಾಳುತ್ವವನ್ನು ವಹಿಸಿಕೊಂಡಿದ್ದಾಳೆ. ಬ್ರಿಟಿಷ್ ಸಾಮ್ರಾಜ್ಯ ಶಾಹಿತ್ವವನ್ನು ಸದೆ ಬಡಿದು ವಿಜಯ ಪಡೆದು 200 ವರ್ಷಗಳು ಗತಿಸಿವೆ. ಈ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರ ಬೌದ್ಧಿಕ ಮತ್ತು ಮಾನಸಿಕ ಮಟ್ಟವನ್ನು ಉನ್ನತೀಕರಿಸುವ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್.ಎಂ. ಗಂಗಾಧರಯ್ಯ ನಿರ್ದೇಶಕರು ರಾಣಿ ಚನ್ನಮ್ಮ ಅಧ್ಯಯನ ಪೀಠ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಭೂಮಿಯ ಮೇಲೆ ಕೋಟಿ ಕೋಟಿ ಜನ ಬದುಕಿದರು. ಆದರೆ ಎಲ್ಲರೂ ಇತಿಹಾಸ ಸೃಷ್ಟಿಸಲಿಲ್ಲ . ಇತಿಹಾಸ ಸೃಷ್ಟಿಸಿದ ಕೆಲವೆ ಕೆಲವರಲ್ಲಿ ರಾಣಿ ಚನ್ನಮ್ಮ ಅಗ್ರಗಣ್ಯಳು. ರಾಣಿ ಚನ್ನಮ್ಮಳ ಇತಿಹಾಸ ಹಾಗೂ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಶಿಕ್ಷಣರ್ಥಿ ಪೂಜಾ ಪೂಜೇರಿ ತಂಡದವರು ಪ್ರಾರ್ಥಿಸಿದರು, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಸ್ವಾಗತಿಸಿದರು. ಡಾ. ಮಹೇಶ ಗಾಜಪ್ಪನವರ ಸಂಯೋಜಕರು ರಾಣಿ ಚನ್ನಮ್ಮ ಅಧ್ಯಯನ ಪೀಠ ಪ್ರಾಸ್ತಾವಿಕ ಹಾಗೂ ಉಪನ್ಯಾಸಕರ ಪರಿಚಯ ಮಾಡಿದರು. ಡಾ. ಎಸ್. ವಿ. ವಾಲಿ ಶೆಟ್ಟಿ ಸಹಾಯಕ ಪ್ರಾಧ್ಯಾಪಕರು ವಂದಿಸಿದರು. ಪ್ರೊ.ಮಂಜುನಾಥ ಕಲಾಲ ಹಾಗೂ ಪ್ರೊ.ಸೋನಲ ಚಿನಿವಾಲ ಸಹಾಯಕ ಪ್ರಾಧ್ಯಾಪಕರು ನಿರೂಪಿಸಿದರು.