ಬೆಳಗಾವಿ : ಕಿತ್ತೂರಿನಲ್ಲಿ ನಡೆಯುತ್ತಿರುವ ಕಿತ್ತೂರು ವಿಜಯೋತ್ಸವದ 200 ನೇ ವರ್ಷಾಚರಣೆ ಅಂಗವಾಗಿ ಗುರುವಾರ ನಡೆದ ರಾಜ್ಯಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಹಿಳಾ ಸಾಹಿತಿಗಳು ಅತ್ಯಂತ ಅರ್ಥಪೂರ್ಣವಾಗಿ ತಮ್ಮ ವಿಚಾರವನ್ನು ಮಂಡಿಸಿದರು. ವಿಶ್ರಾಂತ ಕುಲಪತಿ ಮತ್ತು ಸಾಹಿತಿ ಮಲ್ಲಿಕಾ ಘಂಟಿ ಮಾತನಾಡಿ, ನಿಮಗೆ ಏನು ಬೇಕು ಎಂದು ಹೆಣ್ಣುಮಕ್ಕಳನ್ನು ಕೇಳಿದರೆ ಬಹುಪಾಲು ಮಂದಿ ಒಡವೆ, ವಸ್ತ್ರಗಳಂಥ ಭೌತಿಕ ವಸ್ತುಗಳನ್ನೇ ಕೇಳುತ್ತಾರೆ. ಆದರೆ, ತನಗೆ ಸ್ವಾಭಿಮಾನ- ಸ್ವಾತಂತ್ರ್ಯ ಬೇಕು ಎಂದು ಯಾರೂ ಕೇಳುವುದಿಲ್ಲ. ಹೆಣ್ಣುಮಕ್ಕಳು ಪಂಜರದೊಳಗಿನ ಗಿಳಿಯಂತಾಗಿ ಬಿಟ್ಟಿದ್ದೇವೆ ಎಂದು ಹೇಳಿದರು.

ತನ್ನ ಅಸ್ತಿತ್ವ ಎಲ್ಲಿದೆ, ತನಗೆ ಬಹುಮುಖ್ಯವಾಗಿ ಏನು ಬೇಕಾಗಿದೆ ಎಂಬುದೇ ಹೆಣ್ಣುಮಕ್ಕಳಿಗೆ ಗೊತ್ತಿಲ್ಲ. ಪುರುಷರು ಒಂದಷ್ಟು ಆಭರಣ, ಬಟ್ಟೆ ಕೊಡಿಸಿ ಸಲುಹಿದರೆ ಅದರಲ್ಲೇ ತೃಪ್ತರಾಗುವ ಬೆಳೆಸಿಕೊಂಡಿದ್ದಾರೆ. ಮನೋಭಾವ ಸ್ವತಂತ್ರ ಭಾರತದಲ್ಲೇ ಮಹಿಳೆ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಎಂದರು.

ಕಿತ್ತೂರು ಹಾಗೂ ಸಮಕಾಲಿನ ಪ್ರಭುತ್ವಗಳ ಸಂಬಂಧಗಳ ಕುರಿತು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ ಕವಿತಾ ಕುಸುಗಲ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಈ ಭಾಗದ ದೊರೆಗಳ ಮೇಲೆ ಪರಕೀಯರ
ದಾಳಿಗಳು ಹೆಚ್ಚಿದವು. ಕಿತ್ತೂರು
ಸಂಸ್ಥಾನದ ಇತಿಹಾಸ ಕೂಡ ಅಲ್ಲಿಂದಲೇ
ಕಂಡುಬರುತ್ತದೆ. 286 ಹಳ್ಳಿಗಳನ್ನು
ಒಳಗೊಂಡ, ₹5 ಲಕ್ಷ ವಾರ್ಷಿಕ
ಆದಾಯ ಹೊಂದಿದ ಸಂಸ್ಥಾನವಿದು
ಎಂಬುದು
ಸಂಶೋಧನೆಗಳಿಂದ
ತಿಳಿದುಬಂದಿದೆ. ಅಷ್ಟು ಸಂಪದ್ಭರಿತ
ನಾಡು ಇದಾಗಿತ್ತು ಎಂದರು.

ನವಾಬರು, ಫ್ರೆಂಚರು, ಡಚ್ಚರು,
ಬ್ರಿಟಿಷರು, ಟಿಪ್ಪುಸುಲ್ತಾನ್ ಮೊದಲಾಗಿ ಹಲವರು ಕಿತ್ತೂರ ಮೇಲೆ ಯುದ್ಧ ಸಾರಿದ್ದಾರೆ. ಗಂಡ- ಮಕ್ಕಳು ಸತ್ತ ಮೇಲೂ ಚಿಂತೆಗೆ ಬೀಳದ ಚನ್ನಮ್ಮ ದಿಟ್ಟೆಯಾಗಿ ರಾಜ್ಯಭಾರ ಮಾಡಲು ನಿಂತಿದ್ದು ಆಕೆಯ ಕನ್ನಡಿ ಹಿಡಿಯುತ್ತದೆ ಅಭಿಪ್ರಾಯಪಟ್ಟರು.

ಕಿತ್ತೂರು ಅಂದು- ಕುರಿತು ವಿಚಾರ ಮಂಡಿಸಿದ ಲೇಖಕಿ ಸವಿತಾ ದೇಶಮುಖ, ದೊಡ್ಡಬಾವಪ್ಪ ಮೂಗಿ ಅವರೇ ಮೊದಲಿಗೆ ಕಿತ್ತೂರು ಇತಿಹಾಸದ ಸಂಗ್ರಹಿಸಿದ್ದಾರೆ. ಕುರುಹುಗಳನ್ನು 10 ಸಾವಿರ ಕಾಗದ ಪತ್ರಗಳು, 300ಕ್ಕೂ ಹೆಚ್ಚು ಜನಪದ ಗೀತೆಗಳನ್ನು ಅವರು ಸಂರಕ್ಷಿಸಿದ್ದಾರೆ. ಅಲ್ಲಿಂದಲೇ ನಮಗೆ ನಿಖರ ಇತಿಹಾಸ ಬೆಳಕಿಗೆ ಬಂದಿದೆ’ ಎಂದರು.

ಬಸವಣ್ಣ ಅವರಿಗೆ ಸಾಂಸ್ಕೃತಿಕ ನಾಯಕ ಎಂಬ ಗೌರವ ನೀಡಿದಂತೆಯೇ ಚನ್ನಮ್ಮನಿಗೂ ಸರ್ಕಾರಿ ಗೌರವ ಸಲ್ಲಬೇಕು ಎಂದು ಒತ್ತಾಯಿಸಿದರು.

ಚನ್ನಮ್ಮನ ಕುರಿತು ಬಂದ ಸಾಹಿತ್ಯ ಕುರಿತು ಮಾತನಾಡಿದ ಅಮೃತಾ ಶೆಟ್ಟಿ, ಚನ್ನಮ್ಮನ ಹೋರಾಟದಿಂದ ಯುವಪೀಳಿಗೆ ಮೇಲಿನ ಪ್ರಭಾವ ಕುರಿತು ಸಂಪದಾ ಕೇರಿಮನಿ ವಿಚಾರ ಮಂಡಿಸಿದರು.