ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಬ್ರಾ ಕುಸ್ತಿ ಕಮೀಟಿಯವರು ಆಯೋಜಿಸಿದ್ದ ಕುಸ್ತಿ ಸ್ಪರ್ಧೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು.

ಕುಸ್ತಿ ಪಟುಗಳಿಗೆ ಶುಭ ಕೋರಿದ ಅವರು, ಕ್ರೀಡೆಯಲ್ಲಿನ ಗ್ರಾಮಸ್ಥರ ಶೃದ್ಧೆಯನ್ನು ಪ್ರಶಂಸಿಸಿದರು.

ನಮ್ಮ ಸಂಸ್ಕೃತಿ ಉಳಿದಿರುವುದೇ ಇಂತಹ ಜನರಿಂದ. ನಾವು ನಿರಂತರವಾಗಿ ಕ್ರೀಡೆ ಸೇರಿದಂತೆ ಕ್ರಿಯಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ ಎಂದು ಚನ್ನರಾಜ ಹೇಳಿದರು.

ಈ ಸಂದರ್ಭದಲ್ಲಿ ರಾಜು ದೇಸಾಯಿ, ನಾಗೇಶ್ ದೇಸಾಯಿ, ಡಾ.ಗಿರೀಶ ಸೋನವಾಲ್ಕರ್, ಜಯವಂತ ಬಾಳೇಕುಂದ್ರಿ, ಡಾ.ಅಮಿತ್ ಚಿಂಗಳೆ, ಯುವರಾಜ ಜಾಧವ್, ಅಬ್ದುಲ್ ಬಾಗವಾನ್, ಮಹೇಂದ್ರ ಗೋಠೆ, ಯಲ್ಲಪ್ಪ ಹರ್ಜಿ, ನವೀನ್ ಪಾಟೀಲ, ಲಕ್ಷ್ಮಣ ಸುಳೇಭಾವಿ, ಸಿ.ಪಿ.ಆಯ್ ಕಲ್ಯಾಣಶೆಟ್ಟಿ, ಪಿ.ಎಸ್.ಆಯ್ ಮಂಜು ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.