Join The Telegram | Join The WhatsApp |
ಅಥಣಿ-
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ. 7-12-22 ರಿಂದ 2 ದಿನಗಳ ಕಾಲ ಆಯೋಜಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ್‌ಕಾಲೇಜ್ ಮಹಿಳೆಯರ ವ್ಹಾಲಿಬಾಲ್ ಪಂದ್ಯಾವಳಿಗಳು ಮತ್ತು ವಿಶ್ವವಿದ್ಯಾಲಯಗಳ ತಂಡದ ಆಯ್ಕೆಯ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಯುವ ನಾಯಕರಾದ ಚಿದಾನಂದ ಲ. ಸವದಿಯವರು ಪಾಲ್ಗೊಂಡು ವ್ಹಾಲಿಬಾಲ್ ಆಡುವುದರೊಂದಿಗೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರಿಂದ ದೈಹಿಕ ಸದೃಢತೆ ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕಲಿಕೆಯೊಂದಿಗೆ ಆಸಕ್ತ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಲು ಪ್ರಯತ್ನಿಸಬೇಕು. ಅಥಣಿ ತಾಲೂಕಿನಲ್ಲಿನ ವಿದ್ಯಾರ್ಥಿಗಳು, ಯುವ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟಮಟ್ಟದಲ್ಲಿ ಮಿಂಚುವಂತಾಗಬೇಕು. ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ಅಗತ್ಯ ಸಹಾಯ ಹಾಗೂ ಕಾಲೇಜಿಗೆ ಸಕಲ ರೀತಿಯ ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಸೋಲು-ಗೆಲುವು ಸಮನಾಗಿ ಸ್ವೀಕರಿಸುವ ಮೂಲಕ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅನೀಲ ಕೇಶವ ಬುಲಬುಲೆ, ಕಲ್ಲೇಶ ಮಡ್ಡಿ ಹಾಗೂ ಮಹಾಂತೇಶ ಠಕ್ಕಣ್ಣವರ, ಸಚಿನ್ ಬುರ್ಲಿ, ಪ್ರಾಂಶುಪಾಲರಾದ ಡಿ.ವೈ. ಕಾಂಬಳೆ, ಉಪನ್ಯಾಸಕರಾದ ವಿಲಾಸ ಎನ್. ಕಾಂಬಳೆ ರಾಮಣ್ಣ ದೊಡ್ಡನಿಂಗಪ್ಪಗೋಳ, ಆರ್.ಎಸ್. ಅಂಬಿ, ಪಿ.ಎಲ್. ಪೂಜಾರಿ, ಪ್ರಭಾಕರ್ ಆರ್. ಖ್ಯಾಡಿ, ಸೇರಿದಂತೆ ಹಲವು ಗಣ್ಯಮಾನ್ಯರು, ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Join The Telegram | Join The WhatsApp |