Join The Telegram | Join The WhatsApp |
ಬೆಳಗಾವಿ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ಲ ಶ್ರೀ ಕುಮಾರೇಶ್ವರ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರದ ರಥಯಾತ್ರೆ ಹಾಗೂ ಧ್ವನಿ ಸುರುಳಿಯ ಉದ್ಘಾಟನೆಯನ್ನು ಮಂಗಳವಾರ ನಗರದ ಲಿಂಗರಾಜ ಕಾಲೇಜಿನ ಮೈದಾನದಲ್ಲಿ ನೆರವೇರಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಹಾನಗಲ್ಲ ಕುಮಾರಸ್ವಾಮಿಗಳು ಆಧ್ಯಾತ್ಮಿಕ ಕ್ರಾಂತಿ ಮಾಡಿ ವೀರಶೈವ ಸಮಾಜವನ್ನು ಎತ್ತಿಹಿಡಿದವರು. ಅವರದು ಚಿಂತಕರನ್ನು ನಿರ್ಮಾಣ ಮಾಡುವ ಕೇಂದ್ರ. ಶಿವಯೋಗಿ ಮಂದಿರ ಮುಖಾಂತರ ಸಂಸ್ಕೃತಿ ಪರಂಪರೆಯ ಬುನಾದಿ ಹಾಕಿದವರು. ಲಿಂಗಾಯತ ಸಮಾಜ ಚಲನಶೀಲ, ಎಲ್ಲರೊಂದಿಗೆ ಬೆರೆಯುವ ಪ್ರಗತಿಪರ ಸಮಾಜ ಎಂದು ಹೇಳಿದರು.
ದಾಸೋಹ , ಅಕ್ಷರ ಕಲಿಕೆ ಹಾಗೂ ಬದುಕು ಕೊಟ್ಟಿದ್ದು ಹಾನಗಲ್ಲ ಕುಮಾರಗಳು. ಅವರ ಜೀವನ ಚರಿತ್ರೆ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಹಾನಗಲ್ಲ ಕುಮಾರಸ್ವಾಮಿಗಳು ನಾಡಿನಲ್ಲಿ ಭಿಕ್ಷೆ ಎತ್ತಿ ಸಮಾಜವನ್ನು ಉದ್ದಾರಗೊಳಿಸಿದರು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಘೂಳಪ್ಪ ಹೊಸಮನಿ, ಸುಜಿತ ಮುಳಗುಂದ, ಬಿ.ಬಿ.ಕಗ್ಗಣಗಿ, ಬಸವರಾಜ ಜವಳಿ ಉಪಸ್ಥಿತರಿದ್ದರು.
ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು.
Join The Telegram | Join The WhatsApp |