ಕರಾವಳಿಯ ಕಂಬಳ ಕ್ರೀಡೆ ಜಾತ್ಯಾತೀತ ಕ್ರೀಡೆಯಾಗಿದೆ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಮಾಡಲು ಸ್ಪೀಕರ್ ಯು.ಟಿ ಖಾದರ್ ಮತ್ತು ಪುತ್ತೂರು ಶಾಸಕ ಅಶೋಕ್ ರೈ ಒತ್ತಾಯಿಸಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಉಳ್ಳಾಲ:

ಎಲ್ಲಾ ಜಾತಿ, ಧರ್ಮದವರನ್ನು ಒಟ್ಟುಗೂಡಿಸಿ ನಡೆಯುವ ಕರಾವಳಿಯ ಕಂಬಳ ಕ್ರೀಡೆ ಜಾತ್ಯಾತೀತ ಕ್ರೀಡೆಯಾಗಿದೆ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಮಾಡಲು ಸ್ಪೀಕರ್ ಯು.ಟಿ ಖಾದರ್ ಮತ್ತು ಶಾಸಕ ಅಶೋಕ್ ರೈ ಒತ್ತಾಯಿಸಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಕುರ್ಚಿಯಲ್ಲಿ ಕೂತ್ಕಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ- ಬೋಳದಲ್ಲಿ ಸ್ಪೀಕ‌ರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ತೃತೀಯ ವರ್ಷದ ಹೊನಲು ಬೆಳಕಿನ ನರಿಂಗಾನ ಲವ-ಕುಶ ಜೋಡುಕರೆ ಕಂಬಳದಲ್ಲಿ
ಮಾತನಾಡಿದರು. ಕಂಬಳವು ಕರಾವಳಿಯ ಪುರಾತನ ಜನಪ್ರಿಯ ಗ್ರಾಮೀಣ ಕ್ರೀಡೆ. ಕಂಬಳವನ್ನು ಸುಪ್ರೀಮ್ ಕೋರ್ಟ್ ನಿಷೇಧಗೊಳಿಸಿತ್ತು. ನಮ್ಮ ಅಂದಿನ ಕಾಂಗ್ರೆಸ್ ಸರಕಾರವು ಕಂಬಳಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿತ್ತು. ರೈತರಿಗೆ ಪ್ರಾಣಿಗಳ ಜೊತೆ ಅವಿನಾಭಾವ ಸಂಬಂಧ ಇದೆ. ಅದರ ಭಾಗವಾಗಿ ಈ ಕಂಬಳ ಕ್ರೀಡೆ ನಡೆಯುತ್ತಿದೆ. ರೈತರು ಕಂಬಳದ ಕೋಣಗಳನ್ನು ಬಹಳಷ್ಟು ಮುತುವರ್ಜಿ ವಹಿಸಿ ಸಾಕುತ್ತಾರೆ. ತುಳುವರು ಎಷ್ಟೇ ವಿದ್ಯಾವಂತರಾದರೂ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾರೆ
ಎಂದು ಹೇಳಿದರು.

ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ತುಳು ಭಾಷೆಯನ್ನು
ರಾಜ್ಯದ ಎರಡನೇ ಅಧಿಕೃತ ಭಾಷೆ ಮಾಡುವ ಪ್ರಸ್ತಾವ ಈಡೇರಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.