ದಾವಣಗೆರೆ :
ಮುಂದಿನ ಬಜೆಟ್‌ನಲ್ಲೇ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು,
ಈ ಕಾರ್ಯಕ್ರಮದಿಂದ ಬಡವರಿಗೆ ಸಹಾಯ ಆಗುತ್ತದೆ ಎಂಬುದನ್ನ ಅರಿತು ಬರೆಯಿರಿ. ನಾನು ಹೇಳಿದೆ ಎಂದು ಬರೆಯಬೇಡಿ. ಗಂಡಾ-ಹೆಂಡತಿ ಜಗಳ ಉಂಡ ಮಲಗುವ ತನಕ. ಆರೋಪ ಪ್ರತ್ಯಾರೋಪ ಸಾಮಾನ್ಯ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಬಾರದು. ಅದಕ್ಕೆ ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ. ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಾಗ ಮಾತ್ರ ವೈಚಾರಿಕೆ ಬೆಳೆಯಲು ಸಾಧ್ಯ ಎಂದರು.
ಡಿವಿ ಗುಂಡಪ್ಪ ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪನೆ ಮಾಡಿದ್ದರು. ಪತ್ರಿಕೋದ್ಯಮ ಓದದಿದ್ದವರು ಸಹ ಪತ್ರಕರ್ತರಾಗಿದ್ದಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ ಅವರು ಸಹ ಪತ್ರಕರ್ತರಾಗಿದ್ದರು. ಸ್ವಾತಂತ್ರ್ಯ ಪೂರ್ವ ಪತ್ರಿಕೆಗಳು ಅದ್ಭುತ ಕೆಲಸ ಮಾಡಿವೆ. ದೇಶಕ್ಕೆ ಸ್ವಾತಂತ್ರ್ಯ ಬಂತು. ಪತ್ರಕರ್ತರಾದವರು ಶೇ 90 ಕ್ಕಿಂತ ಹೆಚ್ಚು ಪ್ರಾಮಾಣಿಕವಾಗಿ ಇರಬೇಕು ಎಂದು ಹೇಳಿದರು.