Join The Telegram | Join The WhatsApp |
ಬೆಂಗಳೂರು, ಜನವರಿ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುತ್ ಮಗ್ಗ ನೇಕಾರರಿಗೆ/ ಕಾರ್ಮಿಕರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು ನೇರ ನಗದು (ಡಿಬಿಟಿ) ಮೂಲಕ ವರ್ಗಾವಣೆಗೆ ಜನವರಿ 11, 2023 ರಂದು ಬೆಳಿಗ್ಗೆ 11.30 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಲಿದ್ದಾರೆ.
ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ 2022-23 ನೇ ಸಾಲಿನ ನೇಕಾರ ಸಮ್ಮಾನ್ 5000 ರೂ.ಗಳ ವಾರ್ಷಿಕ ಆರ್ಥಿಕ ನೆರವನ್ನು ಡಿಬಿಟಿ ಮುಖಾಂತರ ಒದಗಿಸಲಾಗುವುದು.
ಇಲಾಖೆಯ ಗಣತಿ/ ಸಮೀಕ್ಷೆಯಲ್ಲಿ ಈವರೆಗೆ ನೋಂದಾಯಿತರಾದ 1,02,980 ನೇಕಾರರು/ಕಾರ್ಮಿಕರು ತಲಾ 5 ಸಾವಿರ ರೂ.ಗಳ ನೆರವನ್ನು ಪಡೆಯಲಿದ್ದಾರೆ.
Join The Telegram | Join The WhatsApp |