ಬೆಳಗಾವಿ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಅತ್ಯಂತ ಮಹತ್ವದ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದಿನವಿಡೀ ಅವರು ಜನರ ಸಮಸ್ಯೆಯನ್ನು ಆಲಿಸಲು ಈ ಕಾರ್ಯಕ್ರಮವನ್ನು ಮೀಸಲಾಗಿಟ್ಟಿದ್ದಾರೆ. ಜನತಾದರ್ಶನದಲ್ಲಿ ಬೆಳಗಾವಿಯ ಮಹಿಳೆ ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇಟ್ಟು ಪರಿಹಾರ ಕಂಡುಕೊಂಡಿದ್ದಾರೆ.

ಏನಿದು ಬೇಡಿಕೆ ?
ಬೆಳಗಾವಿಯ ಉಜ್ಮಾ ಬಾನು ಎಂಬವರು ತಮ್ಮ ತಂದೆಯವರು ಕೆ.ಯು.ಡಬ್ಲ್ಯು.ಎಸ್.ಎಸ್.ಬಿ. ಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೃತಪಟ್ಟಿದ್ದಾರೆ. ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ಮೊದಲಿಗೆ ಹುದ್ದೆಗಳು ಖಾಲಿ ಇಲ್ಲವೆಂದು ತಿಳಿಸಲಾಗಿತ್ತು. ನಂತರ ಅಪ್ರಾಪ್ತ ವಯಸ್ಕರಾದ್ದರಿಂದ ಉದ್ಯೋಗ ನೀಡಲು ಅವಕಾಶವಿಲ್ಲ ಎಂದು ತಿಳಿಸಲಾಗಿತ್ತು. ನಿಯಮಾನುಸಾರ ಅವರು ವಯಸ್ಕರಾದ ನಂತರ ಎರಡು ವರ್ಷಗಳೊಳಗೆ ಅರ್ಜಿಸಲ್ಲಿಸಲು ಅವಕಾಶವಿರುವುದರಿಂದ ಉದ್ಯೋಗ ದೊರಕಿಸುವಂತೆ ಕೋರಿದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಕೆ.ಯು.ಡಬ್ಲ್ಯು.ಎಸ್.ಎಸ್.ಬಿ. ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.