ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ 32 ದಿನಗಳಲ್ಲಿ 3.69 ಕೋಟಿ ರೂ. ಕಾಣಿಕೆ ಸಂದಾಯವಾಗಿದೆ. 3.61 ಕೋಟಿ ರೂ. ವೌಲ್ಯದ ನೋಟು ಹಾಗೂ 8.13 ಲಕ್ಷ ರೂ. ಮೌಲ್ಯದ ನಾಣ್ಯಗಳು, ಚಿನ್ನ, ಬೆಳ್ಳಿ ಆಭರಣ ಸೇರಿ ಒಟ್ಟು 3,69,35,189 ರೂ. ಮೌಲ್ಯದ ಕಾಣಿಕೆಯನ್ನು ಭಕ್ತರು ಅರ್ಪಿಸಿದ್ದಾರೆ.