ಸೋಲಾಪುರ; ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ ೪ನೇ ಪುಣ್ಯಸ್ಮರಣೆಯ ನಿಮಿತ್ತವಾಗಿ ವಿಶ್ವಕನ್ನಡ ರಕ್ಷಕ ದಳದ ವತಿಯಿಂದ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.

ವಿಶ್ವಕನ್ನಡ ರಕ್ಷಕ ದಳದ ರಾಜ್ಯಕೇಂದ್ರ ಕಚೇರಿಯಾದ ಸೋಲಾಪುರ ಗ್ರಾಮದ ಕರ್ನಾಟಕ ರತ್ನ ಡಾ.ರಾಜಕುಮಾರ ವೃತ್ತದಲ್ಲಿ ನಗುಮೊಗದ ಒಡೆಯ ಪುನೀತ್ ರಾಜಕುಮಾರ ಅವರ ಪುಣ್ಯತಿಥಿಯ ನಿಮಿತ್ತವಾಗಿ ಭಾವಚಿತ್ರದ ಪೂಜಾ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ವಂದನಾ ನಾಯಿಕ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ಅಶೋಕ ಮಸ್ತಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ‌. ಸರ್ವ ಸದಸ್ಯರು, ಪಿಡಿಓ, ಸಿಬ್ಬಂದಿ, ಗ್ರಾಮಸ್ಥರು, ಆರಕ್ಷಕ ಸಿಬ್ಬಂದಿ ಸೇರಿದಂತೆ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
ವಿಕರದ ರಾಜ್ಯಾಧ್ಯಕ್ಷ ಡಾ. ಕುಮಾರ ತಳವಾರ ನೇತೃತ್ವದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.