ಕಮಲಶಿಲೆ : ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದಲ್ಲಿ ಶರನ್ನವರಾತ್ರಿ ಮಹೋತ್ಸವ ಗುರುವಾರದಿಂದ ಆರಂಭಗೊಂಡಿದ್ದು, ಅಕ್ಟೋ. 12 ರ ಶನಿವಾರದ ತನಕ ನಡೆಯಲಿದೆ.

ಶರನ್ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಳವು
ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರಗಳೊಂದಿಗೆ ಶೃಂಗಾರಗೊಂಡು ಕಂಗೊಳಿಸುತ್ತಿದೆ. ಪ್ರತಿ ದಿನ ಆಗಮಿಸುವ ಊರ-ಪರವೂರ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಶೀಘ್ರ ದರ್ಶನ,ಸೇವೆಗಳು,ತೀರ್ಥ ಪ್ರಸಾದ ಹಾಗೂ ಸೇವಾ ಕೌಂಟರ್‌ಗಳು,ಶುದ್ದ ಕುಡಿಯುವ ನೀರು, ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ, ವಸತಿ, ಶೌಚಾಲಯಗಳು,
ವಾಹನಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಗುರುವಾರದಿಂದ ಮಹೋತ್ಸವ ಆರಂಭಗೊಂಡಿದ್ದು, ಅ.12 ರ ಶನಿವಾರ ತನಕ ಪ್ರತಿದಿನ ನವರಾತ್ರಿ ವಿಶೇಷ ಪೂಜೆ,
ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಮತ್ತು ಮಹೋತ್ಸವ, ಅ. 9 ನೇ ಬುಧವಾರ ರಾತ್ರಿ
ಶಾರದಾದೇವಿ ಪ್ರತಿಷ್ಠಾಪನೆ, ವಿಶೇಷ ಪೂಜೆ, ಅ.11 ನೇ
ಶುಕ್ರವಾರ ನವಮಿಯಂದು ಮಧ್ಯಾಹ್ನ
ಚಂಡಿಕಾಯಾಗ,ರಾತ್ರಿ ರಜತ ರಥೋತ್ಸವ,ಪುಷ್ಪಕ
ವಾಹನದಲ್ಲಿ ಪುರ ಮೆರವಣಿಗೆ ,(ರಥಬೀದಿ ಹಾಗೂ ರಾಜಬೀದಿ), ಅ.12 ನೇ ಶನಿವಾರ ಉದಯ ಪೂರ್ವ 6.05 ಗಂಟೆಗೆ ಕದಿರು ಮುಹೂರ್ತ,ಧಾನ್ಯ ಸಂಗ್ರಹ ಕಣಜ ತುಂಬಿಸುವುದು,ಶಮೀ ಪೂಜೆ,ಸಂಜೆ ವಿಜಯೋತ್ಸವ, ಪ್ರತಿ ದಿನ ಸಂಜೆ ಗಂಟೆ 7 ಕ್ಕೆ
ಮಹಾಮಂಗಳಾರತಿ, ಪ್ರತಿ ದಿನ ಸಂಜೆ ಗಂ 5.30 ರಿಂದ ಗಂ 7.15 ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ಆಗಮಿಸುವ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ, ಮಧ್ಯಾಹ್ನ ಚಂಡಿಕಾಯಾಗ ಸಂಜೆ ಶ್ರೀರಂಗಪೂಜಾ,ರಾತ್ರಿ ಬೆಳ್ಳಿ ರಥೋತ್ಸವ ಸೇವೆ,ಅನ್ನಸಂತರ್ಪಣೆ ಸೇವೆಯಿದೆ.ಶ್ರೀಕ್ಷೇತ್ರದ ವತಿಯಿಂದ ನಡೆಸಲ್ಪಡುವ ಶ್ರೀಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ 2024-25 ನೇ ಸಾಲಿನ ಎಲ್ಲಾ ಆಟವೂ ಮುಂಗಡ ಬುಕ್ಕಿಂಗ್ ಆಗಿರುತ್ತದೆ. 25-26 ನೇ ಸಾಲಿನಲ್ಲಿ ಆಟ ಆಡಿಸಲು
ಇಚ್ಚಿಸುವವರು ರೂ. 5000 ಮುಂಗಡ ದೇವಳದ ಕಚೇರಿಯಲ್ಲಿ ಪಾವತಿಸಿ ಆಟದ ದಿನಾಂಕವನ್ನು ನಿಗದಿಪಡಿಸಿಕೊಳ್ಳುವುದು. ಶ್ರೀಕ್ಷೇತ್ರಕ್ಕೆ ಚಿನ್ನದ ರಥವನ್ನು ನಿರ್ಮಿಸಲು ಭಕ್ತಾದಿಗಳು ರಥಕ್ಕೆ ಚಿನ್ನವನ್ನು ನೀಡುವವರು ದೇವಳದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.