ದೆಹಲಿ :
ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಧಾರಣ ಗಡುವಿನ ದಿನದಂದು ಗುಜರಾತ್ ಟೈಟಾನ್ಸ್ ಕ್ಯಾಂಪ್‌ ನಿಂದ ದಿನದ ದೊಡ್ಡ ಸುದ್ದಿಯೊಂದಿಗೆ 85 ಆಟಗಾರರನ್ನು ಬಿಡುಗಡೆ ಮಾಡಲಾಯಿತು. ಭಾರತದ ಆಲ್‌ರೌಂಡರ್ ಮುಂಬೈ ಇಂಡಿಯನ್ಸ್‌ಗೆ ಹೋಗಲಿದ್ದಾರೆ ಎಂಬ ವರದಿಗಳಿಗೆ ವಿರುದ್ಧವಾಗಿ ಗುಜರಾತ್‌ ಟೈಟಾನ್ಸ್‌ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಂಡಿತು.

ನವೆಂಬರ್ 26 ರ ಭಾನುವಾರದಂದು, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ನೊಂದಿಗೆ ಉಳಿದುಕೊಂಡರು. ಆದರೆ ಡಿಸೆಂಬರ್ 19 ರಂದು ಯುಎಇಯಲ್ಲಿ ನಡೆಯಲಿರುವ IPL-2024 ಹರಾಜಿನ ಒಂದು ವಾರದ ಮೊದಲು ಫ್ರಾಂಚೈಸಿಗಳು ಹಲವರನ್ನು ಉಳಿಸಿಕೊಂಡವು ಹಾಗೂ ಕೆಲವರನ್ನು ಬಿಡುಗಡೆ ಮಾಡಿದವು.
2022 ರ ಡಿಸೆಂಬರ್‌ನಲ್ಲಿ ರಸ್ತೆ ಅಪಘಾತದ ಸಂದರ್ಭದಲ್ಲಿ ಉಂಟಾದ ಬಹು ಗಾಯಗಳಿಂದ ಸಂಪೂರ್ಣ ಚೇತರಿಸಿಕೊಂಡ ನಂತರ, ಮುಂದಿನ ಋತುವಿನಲ್ಲಿ ಆಡಲು ಸಿದ್ಧ ಎಂದು ತಿಂಗಳ ಆರಂಭದಲ್ಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ದೃಢಪಡಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರನ್ನು ಉಳಿಸಿಕೊಂಡಿದೆ.
ಎಲ್ಲ 10 ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಹರಾಜಿಗೆ ಸಿದ್ಧವಾಗಿವೆ, ಬಿಡ್ಡಿಂಗ್ ವಾರ್‌ಗೆ ಮುಂಚಿತವಾಗಿ ಅವರು ಯಾವ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಬಿಡುಗಡೆ ಮಾಡಲು ಬಯಸುತ್ತಾರೆ ಎಂಬುದನ್ನು ನಿರ್ಧರಿಸಿದ್ದಾರೆ.

ಗುಜರಾತ್ ಟೈಟಾನ್ಸ್ ನಾಯಕ ಈ ಫ್ರಾಂಚೈಸಿಯೊಂದಿಗೆ ಎರಡು ಸೀಸನ್‌ ಕಳೆದ ನಂತರ ತನ್ನ ಹಳೆಯ ಫ್ರಾಂಚೈಸಿಗೆ ಮರು-ಸೇರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಗುಜರಾತ್ ಫ್ರಾಂಚೈಸಿಗಳು ತಮ್ಮ ನಾಯಕನನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೈದಾನಕ್ಕೆ ಮರಳುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿತು.

ಡಿಸೆಂಬರ್ 2022 ರಲ್ಲಿ ಕಾರ್ ಅಪಘಾತದಲ್ಲಿ ಪಂತ್ ಅವರು ತೀವ್ರವಾಗಿ ಗಾಯಗೊಂಡ ನಂತರ ಸಂಪೂರ್ಣ IPL-2023 ರ ಸೀಸನ್‌ ನಲ್ಲಿ ಪಾಲ್ಗೊಳ್ಳಲಿಲ್ಲ.

ಐಪಿಎಲ್ 2024 – 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್‌…
ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ರಿಷಭ್ ಪಂತ್, ಪ್ರವೀಣ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಅಭಿಷೇಕ ಪೊರೆಲ್, ಕುಲದೀಪ ಯಾದವ್, ಅಕ್ಷರ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್‌, ಇಶಾಂತಕುಮಾರ ಶರ್ಮಾ, ಯಶಕುಮಾರ ಶರ್ಮಾ.
ಬಿಡುಗಡೆಯಾದ ಆಟಗಾರರು : ರಿಲೀ ರೊಸೊವ್, ಚೇತನ್ ಸಕಾರಿಯಾ, ರೋವ್‌ಮನ್ ಪೊವೆಲ್, ಮನೀಶ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ ನಾಗರಕೋಟಿ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಅಮನ್ ಖಾನ್, ಪ್ರಿಯಂ ಗಾರ್ಗ್.

ರಾಜಸ್ಥಾನ್ ರಾಯಲ್ಸ್:
ಉಳಿಸಿಕೊಂಡಿರುವ ಆಟಗಾರರು: ಸಂಜು ಸ್ಯಾಮ್ಸನ್ (ಸಿ), ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ರಿಯಾನ್ ಪರಾಗ, ಡೊನೊವನ್ ಫೆರೇರಾ, ಕುನಾಲ ರಾಥೋಡ್, ರವಿಚಂದ್ರನ್ ಅಶ್ವಿನ್, ಕುಲದೀಪ ಸೇನ್, ನವದೀಪ ಸೈನಿ, ಪ್ರಸಿದ್ಧ ಕೃಷ್ಣ, ಸಂದೀಪ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಆಡಂ ಝಂಪಾ.
ತಂಡದಿಂದ ಬಿಡುಗಡೆಗೊಂಡ ಆಟಗಾರರು: ಜೋ ರೂಟ್, ಅಬ್ದುಲ್ ಬಸಿತ್, ಜೇಸನ್ ಹೋಲ್ಡರ್, ಆಕಾಶ್ ವಶಿಷ್ಟ, ಕುಲದೀಪ ಯಾದವ್, ಓಬೇದ್ ಮೆಕಾಯ್, ಮುರುಗನ್ ಅಶ್ವಿನ್, ಕೆ.ಸಿ. ಕಾರಿಯಪ್ಪ, ಕೆ.ಎಂ. ಆಸಿಫ್.
ಟ್ರೇಡ್‌ ಆದ ಆಟಗಾರ: ಅವೇಶ್ ಖಾನ್

ಪಂಜಾಬ್ ಕಿಂಗ್ಸ್:
ಉಳಿಸಿಕೊಂಡಿರುವ ಆಟಗಾರರು: ಶಿಖರ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಭಾಸಿಮ್ರಾನ್ ಸಿಂಗ್ (WK), ಜಿತೇಶ ಶರ್ಮಾ (WK), ಸಿಕಂದರ್ ರಾಜಾ, ರಿಷಿ ಧವನ್, ಲಿಯಾಂ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಸ್ಯಾಮ್ ಕರ್ರಾನ್, ಕಗಿಸೊ ರಬಾಡ, ಹರಪ್ರೀತ್ ಬ್ರಾರ್ , ರಾಹುಲ್ ಚಾಹರ್, ಹರಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್
ಬಿಡುಗಡೆಯಾದ ಆಟಗಾರರು: ಮೋಹಿತ್ ರಥಿ, ರಾಜ್ ಬಾವಾ, ಶಾರುಖ್ ಖಾನ್, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್

ಚೆನ್ನೈ ಸೂಪರ್ ಕಿಂಗ್ಸ್
ಉಳಿಸಿಕೊಂಡಿರುವ ಆಟಗಾರರು: ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್‌ ಕೀಪರ್‌), ಮೊಯಿನ್ ಅಲಿ, ದೀಪಕ ಚಾಹರ್, ಡೆವೊನ್ ಕಾನ್ವೇ (ವಿಕೆಟ್‌ ಕೀಪರ್‌), ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ ಗಾಯಕ್ವಾಡ್, ರಾಜವರ್ಧನ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ ಮಂಡಲ್, ಮುಖೇಶ ಚೌಧರಿ, ಮತೀಶ ಪತಿರಣ, ಅಜಿನ್ ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ ಸಿಂಗ್, ನಿಶಾಂತ ಸಿಂಧು, ಪ್ರಶಾಂತ ಸೋಲಂಕಿ, ಮಹೇಶ ತೀಕ್ಷಣ.
ಬಿಡುಗಡೆಯಾದ ಆಟಗಾರರು: ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಭಗತ ವರ್ಮಾ, ಸುಭ್ರಾಂಶು ಸೇನಾಪತಿ, ಅಂಬಟಿ ರಾಯುಡು, ಕೈಲ್ ಜೇಮಿಸನ್, ಆಕಾಶ ಸಿಂಗ್, ಸಿಸಂದಾ.

ಕೋಲ್ಕತ್ತಾ ನೈಟ್ ರೈಡರ್ಸ್
ಉಳಿಸಿಕೊಂಡಿರುವ ಆಟಗಾರರು: ನಿತೀಶ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಸುನಿಲ ನಾರಾಯಣ, ಸುಯಾಶ ಶರ್ಮಾ, ಅನುಕುಲ ರಾಯ್, ಆಂಡ್ರೆ ರಸೆಲ್, ವೆಂಕಟೇಶ ಅಯ್ಯರ್, ಹರ್ಷಿತ ರಾಣಾ, ವೈಭವ ಅರೋರಾ, ವರುಣ ಚಕ್ರವರ್ತಿ
ಬಿಡುಗಡೆಯಾದ ಆಟಗಾರರು: ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೈಸ್, ನಾರಾಯಣ ಜಗದೀಸನ್, ಮಂದೀಪ ಸಿಂಗ್, ಕುಲ್ವಂತ್ ಖೆಜ್ರೋಲಿಯಾ, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್

ಸನ್ ರೈಸರ್ಸ್ ಹೈದರಾಬಾದ್:
ಉಳಿಸಿಕೊಂಡಿರುವ ಆಟಗಾರರು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್ (ನಾಯಕ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಹೆನ್ರಿಚ್ ಕ್ಲಾಸೆನ್, ಮಯಾಂಕ್ ಅಗರ್ವಾಲ್, ಅನ್ಮೋಲಪ್ರೀತ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ನಿತೀಶಕುಮಾರ ರೆಡ್ಡಿ, ಅಭಿಷೇಕ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ, ಸನ್ವಿರ ಸಿಂಗ್, ಭುವನೇಶ್ವರಕುಮಾರ, ಟಿ. ನಟರಾಜನ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಫಜಲ್ಹಕ್ ಫಾರೂಕಿ
ಬಿಡುಗಡೆಯಾದ ಆಟಗಾರರು: ಹ್ಯಾರಿ ಬ್ರೂಕ್, ಸಮರ್ಥ ವ್ಯಾಸ್, ಕಾರ್ತಿಕ ತ್ಯಾಗಿ, ವಿವ್ರಾಂತ ಶರ್ಮಾ, ಅಕೇಲ್ ಹೊಸೈನ್, ಆದಿಲ್ ರಶೀದ್
ಟ್ರೇಡ್‌ ಆದ ಆಟಗಾರರು: ಶಹಬಾಜ್ ಅಹ್ಮದ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಂದ)

ಲಕ್ನೋ ಸೂಪರ್ ಜೈಂಟ್ಸ್:
ಉಳಿಸಿಕೊಂಡಿರುವ ಆಟಗಾರರು: ಕೆಎಲ್ ರಾಹುಲ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ ಹೂಡಾ, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಕುನಾಲ್ ಪಾಂಡ್ಯ, ಯುಧ್ವೀರ ಸಿಂಗ್, ಪ್ರೇರಕ ಮಂಕಡ್, ಯಶ ಠಾಕೂರ್, ಅಮಿತ ಮಿಶ್ರಾ, ಮಾರ್ಕ್ ವುಡ್, ಮಯಾಂಕ ಯಾದವ್, ಮೊಹ್ಸಿನ್ ಖಾನ್

ಬಿಡುಗಡೆಗೊಂಡ ಆಟಗಾರರು: ಜಯದೇವ ಉನದ್ಕತ್, ಡೇನಿಯಲ್ ಸಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರಣ ಶರ್ಮಾ, ಅರ್ಪಿತ್ ಗುಲೇರಿಯಾ, ಸೂರ್ಯಾಂಶ ಶೆಡ್ಗೆ, ಕರುಣ್ ನಾಯರ್
ಟ್ರೇಡ್‌ ಆದ ಆಟಗಾರರು: ದೇವದತ್ ಪಡಿಕ್ಕಲ್ (ರಾಜಸ್ಥಾನ್ ರಾಯಲ್ಸ್‌ನಿಂದ)

ಗುಜರಾತ್ ಟೈಟಾನ್ಸ್:
ಉಳಿಸಿಕೊಂಡಿರುವ ಆಟಗಾರರು: ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ ಸಹಾ, ಕೇನ್ ವಿಲಿಯಮ್ಸನ್, ಅಭಿನನ ಮನೋಹರ, ಬಿ ಸಾಯಿ ಸುದರ್ಶನ, ದರ್ಶನ ನಲ್ಕಂಡೆ, ವಿಜಯ ಶಂಕರ, ಜಯಂತ ಯಾದವ್, ರಾಹುಲ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸ. ಕಿಶೋರ, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ ಶರ್ಮಾ
ಬಿಡುಗಡೆಯಾದ ಆಟಗಾರರು: ಯಶ ದಯಾಳ್, ಕೆ.ಎಸ್. ಭರತ, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ ಸಾಂಗ್ವಾನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದಸುನ್ ಶನಕ

ಮುಂಬೈ ಇಂಡಿಯನ್ಸ್
ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ (ನಾಯಕ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ ಯಾದವ್, ಇಶಾನ ಕಿಶನ್, ಎನ್. ತಿಲಕ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ, ಅರ್ಜುನ ತೆಂಡೂಲ್ಕರ್, ಕ್ಯಾಮೆರಾನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ ಕಾರ್ತಿಕೇಯ, ಪಿಯೂಷ ಚಾವ್ಲಾ, ಆಕಾಶ ಮಾಧ್ವಲ್, ಜೇಸನ್ ಬೆಹ್ರೆನ್ಡಾರ್ಫ್
ಬಿಡುಗಡೆಯಾದ ಆಟಗಾರರು: ಮೊಹಮ್ಮದ್ ಅರ್ಷದ್ ಖಾನ್, ರಮಣದೀಪ ಸಿಂಗ್, ಹೃತಿಕ ಶೋಕೀನ್, ರಾಘವ ಗೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟಾನ್ ಸ್ಟಬ್ಸ್, ಡುವಾನ್ ಜಾನ್ಸೆನ್, ಝೈ ರಿಚರ್ಡ್ಸನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡಾನ್, ಸಂದೀಪ ವಾರಿಯರ್
ಟ್ರೇಡ್‌ ಆದ ಆಟಗಾರರು: ರೊಮಾರಿಯೊ ಶೆಫರ್ಡ್ (ಲಕ್ನೋ ಸೂಪರ್ ಜೈಂಟ್ಸ್‌ನಿಂದ ಟ್ರೇಡ್‌)

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ ಪಾಟಿದಾರ್, ಅನುಜ ರಾವತ್, ದಿನೇಶ ಕಾರ್ತಿಕ್, ಸುಯಶ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ ಲೊಮ್ರೋರ್, ಕರ್ಣ ಶರ್ಮಾ, ಮನೋಜ ಭಾಂಡಗೆ, ವೈಶಾಕ ವಿಜಯಕುಮಾರ, ಆಕಾಶ ದೀಪ, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್‌ ಕುಮಾರ
ಬಿಡುಗಡೆಯಾದ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ ಸಿಂಗ್, ಸಿದ್ದಾರ್ಥ ಕೌಲ್, ಕೇದಾರ ಜಾಧವ
ಟ್ರೇಡ್ ಆದ ಆಟಗಾರರು: ಮಯಾಂಕ್ ದಾಗರ್ (ಸನ್‌ರೈಸರ್ಸ್ ಹೈದರಾಬಾದ್‌ನಿಂದ)

IPL 2024 ಹರಾಜಿಗಾಗಿ ತಂಡಗಳು ಉಳಿಸಿಕೊಂಡಿರುವ ಹಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು – 40. 75 ಕೋಟಿ ರೂ
ಸನ್ ರೈಸರ್ಸ್ ಹೈದರಾಬಾದ್ – 34 ಕೋಟಿ ರೂ
ಕೋಲ್ಕತ್ತಾ ನೈಟ್ ರೈಡರ್ಸ್ – 32.7 ಕೋಟಿ ರೂ
ಚೆನ್ನೈ ಸೂಪರ್ ಕಿಂಗ್ಸ್ – 31.4 ಕೋಟಿ ರೂ
ಪಂಜಾಬ್ ಕಿಂಗ್ಸ್ – 29.1 ಕೋಟಿ ರೂ
ದೆಹಲಿ ಕ್ಯಾಪಿಟಲ್ಸ್ – 28.95 ಕೋಟಿ
ಮುಂಬೈ ಇಂಡಿಯನ್ಸ್ – 15.25 ಕೋಟಿ ರೂ
ರಾಜಸ್ಥಾನ್ ರಾಯಲ್ಸ್ – 14.5 ಕೋಟಿ ರೂ