ಶಿರ್ತಾಡಿ : ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಮಂಗಳವಾರ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಮಂಗಳೂರು ಎಸ್ ಡಿ ಎಂ ಕಾನೂನು ಕಾಲೇಜಿನ ಸಹಾಯಕ ಉಪನ್ಯಾಸಕ ಅಹಮದ್ ಹಾಸನ್ ರಝೂಕಿ ಅವರು ವಿಶೇಷ ಉಪನ್ಯಾಸ ನೀಡಿ ಸಮಕಾಲೀನ ಸಾಂವಿಧಾನಿಕ ಕಾನೂನಿನ ಸಮಗ್ರ ವಿಶ್ಲೇಷಣೆಯೊಂದಿಗೆ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ತಿಳಿಸಿದರು. ಮೂಲಭೂತ ಹಕ್ಕುಗಳ ವಿಕಸನ, ಸಾಂವಿಧಾನಿಕ ರಿಟ್ ಗಳ ಹೊಸ ವ್ಯಾಖ್ಯಾನ ಮತ್ತು ಆಧುನಿಕ ಆಡಳಿತದಲ್ಲಿ ಕಾನೂನು ಸವಾಲುಗಳ ಕುರಿತು ವಿವರಿಸಿದರು.
ಪ್ರಾಚಾರ್ಯ ಪ್ರದೀಪ್ ಎಂ.ಬಿ. ಅವರು ಭವಿಷ್ಯದ ಕಾನೂನುಗಳ ಕುರಿತು ತಿಳಿಸಿದರು. ಟ್ರಸ್ಟಿ ಪ್ರಶಾಂತ್ ಎನ್, ಐಕ್ಯೂ ಎಸಿ ಸಂಯೋಜಕರಾದ ಸಂಘಮಿತ್ರ ರಾಯ್ ಪೈ, ಡಾ. ಕೌಶಿಕ್, ಸುಧೀನ್ ಎಂ.ಎಸ್., ಸೌಮ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.