ಪಂಜಾಬ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯದ ಮರು ನಿರ್ಮಾಣಕ್ಕೆ 10 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಗಿದೆ.
64 ವರ್ಷಗಳ ನಂತರ ಮೊದಲ ಹಂತದ ಮರು ನಿರ್ಮಾಣ ಕಾಮಗಾರಿ ಇದಾಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ), ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳನ್ನು ನೋಡಿಕೊಳ್ಳುವ ಫೆಡರಲ್ ಸಂಸ್ಥೆಯಾಗಿದ್ದು ಪಂಜಾಬ್ನ ರಾವಿ ನದಿಯ ಪಶ್ಚಿಮ ದಂಡೆಯ ನಗರವಾದ ನರೋವಾಲ್ನ ಜಫರ್ವಾಲ್ ಪಟ್ಟಣದಲ್ಲಿ ಬಾವೊಲಿ ಸಾಹಿಬ್ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದೆ. 1960 ರಲ್ಲಿ ಇಲ್ಲಿ ಆರಾಧನೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು.