Join The Telegram | Join The WhatsApp |
ಮಂಡ್ಯ-
ಸ್ಕ್ಯಾನಿಂಗ್ ವರದಿ ತಪ್ಪು ಕೊಟ್ಟು ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್ಗೆ 15 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮದ್ದೂರಿನ ಡಿ2 ಡಯಾಗ್ನೋಸ್ಟಿಕ್ ಸೆಂಟರ್‌ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ 15 ಲಕ್ಷ ರೂ. ದಂಡ ಹಾಕಿ ಆದೇಶ ಹೊರಡಿಸಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಸಿಂಧೂಶ್ರೀ ಎಂಬುವರು ಗರ್ಭಿಣಿಯಾಗಿದ್ದಾಗ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸುವಂತೆ ವೈದ್ಯರು ಹೇಳಿದ್ದರು.
ಸಿಂಧೂಶ್ರೀ ಅವರು ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ2 ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಪರೀಕ್ಷೆ ಮಾಡಿಸಿದ್ದರು. ಭ್ರೂಣದ ಅಸಹಜ ಬೆಳವಣಿಗೆ ಪತ್ತೆ ಹಚ್ಚದೇ ತಪ್ಪು ಸ್ಕ್ಯಾನಿಂಗ್ ವರದಿಯನ್ನು ವೈದ್ಯರು ನೀಡಿದ್ದರು. ಇತ್ತ ಸ್ಕ್ಯಾನಿಂಗ್ ವರದಿ ಆಧರಿಸಿ ಸಿಂಧೂಶ್ರೀಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು.
ಇದಾದ ಬಳಿಕ ಮಂಡ್ಯ ಮಿಮ್ಸ್‌ನಲ್ಲಿ ಸಿಂಧೂ ಶ್ರೀಗೆ ಹೆರಿಗೆಯಾಗಿತ್ತು. ಈ ವೇಳೆ ಅಸಹಜವಾಗಿ ಬೆಳವಣಿಗೆಯಾಗಿದ್ದ ಮಗು ಕಂಡು ಪೋಷಕರು ಕಂಗಲಾಗಿದ್ದರು. ಗರ್ಭಿಣಿಯಾದ 20ನೇ ವಾರ ಮಗುವಿನ ಹೃದಯದ ಬಡಿತ, ಕಿಡ್ನಿ, ಮೆದುಳಿನ ಬೆಳವಣಿಗೆ ಬಗ್ಗೆ ಸ್ಕ್ಯಾನಿಂಗ್‍ನಲ್ಲಿ ಪತ್ತೆ ಹಚ್ಚಲಾಗುತ್ತೆ. ಆ ವೇಳೆ ಮಗುವಿನ ಅಸಹಜ ಬೆಳವಣಿಗೆ ಕಂಡು ಬಂದರೆ ಕಾನೂನು ಬದ್ಧವಾಗಿ ತೆಗೆಯಲು ಅವಕಾಶ ಇದೆ. ಆದರೆ ಗರ್ಭಿಣಿಯ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ತಪ್ಪು ವರದಿ ಕೊಟ್ಟಿದ್ದರು. ಡಯಾಗ್ನೋಸ್ಟಿಕ್ ಸೆಂಟರ್‌ನ ವೈದ್ಯರು ಸ್ಕ್ಯಾನಿಂಗ್ ತಪ್ಪು ವರದಿ ಕಾರಣ ಇದೀಗ ಈ ಸಮಸ್ಯೆ ಉಂಟಾಗಿದೆ.
ಡಯಾಗ್ನೋಸ್ಟಿಕ್ ಸೆಂಟರ್‍ನ ತಪ್ಪು ಸಾಬೀತು ಆಗಿರುವ ಕಾರಣ ಇದೀಗ ಸೆಂಟರ್‍ನ ವೈದ್ಯರಾದ ಡಾ.ದೀಪಕ್ ಗೌತಮ್, ಡಾ.ಬಿಎಸ್.ಚೇತನ್, ಹಾಗೂ ಡಾ.ದಯಾನಂದಗೆ 15 ಲಕ್ಷ ರೂ. ದಂಡ ಹಾಕಲಾಗಿದೆ. ಮಗುವಿನ ಹೃದಯದಲ್ಲಿ ಹೋಲ್ ಹಾಗೂ ಬುದ್ಧಿಮಾಂದ್ಯವಾಗಿರುವ ಹಿನ್ನಲೆ, ಕಂಗಲಾಗಿರುವ ಪೋಷಕರು ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಣಕ್ಕಾಗಿ ತಪ್ಪು ವರದಿ ನೀಡಿ ಒಂದು ಮಗುವಿನ ಅಸಹಜ ಸ್ಥಿತಿಗೆ ವೈದ್ಯರು ಕಾರಣರಾಗಿದ್ದಾರೆ. ಡಯಾಗ್ನೋಸ್ಟೀಕ್ ಸೆಂಟರ್ ಅನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.
Join The Telegram | Join The WhatsApp |