Join The Telegram | Join The WhatsApp |
ಇಂದೋರ್ :
ಪ್ರವಾಸಿ ನ್ಯೂಜಿಲೆಂಡ್ ಎದುರಿನ ಕೊನೆಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ 90 ರನ್ ಗಳಿಂದ ಅಮೋಘ ಜಯಗಳಿಸಿ ರ್ಯಾಂಕಿಂಗ್ ನಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡ ಅಪ್ರತಿಮ ಸಾಧನೆ ಮಾಡಿದೆ.
ಭಾರತ ತಂಡದ ಪರವಾಗಿ ನಾಯಕ ರೋಹಿತ್ ಶರ್ಮ ಹಾಗೂ ಶುಭಮನ್ ಗಿಲ್ ಅತ್ಯಮೋಘ ಶತಕ ಬಾರಿಸಿದರು. ಹಾರ್ದಿಕ ಪಾಂಡ್ಯ ಭರ್ಜರಿ ಅರ್ಧ ಶತಕ ಗಳಿಸಿದರು. ಇದರಿಂದ ಭಾರತ ತಂಡ ಒಂಬತ್ತು ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 295 ರನ್ನುಗಳಿಗೆ ಅಲೌಟ್ ಆಯಿತು. ಡೊವೋನ್ ಕಾನ್ವೆ 138 ರನ್ ಗಳಿಸಿ ಔಟಾದರು. ಭಾರತದ ಪರವಾಗಿ ಶಾರ್ದೂಲ್ ಠಾಕೂರ್ ಹಾಗೂ ಕುಲದೀಪ ಯಾದವ್ ತಲಾ ಮೂರು ವಿಕೆಟ್ ಪಡೆದರು.
Join The Telegram | Join The WhatsApp |