ಮಂದಾರ್ತಿ: ಮಂದಾರ್ತಿ ಹಬ್ಬ ಫೆಬ್ರವರಿ 12 ರಿಂದ 14ರ ವರೆಗೆ ನಡೆಯಲಿದೆ. 12ರಂದು ಗೆಂಡ ಸೇವೆ, 13 ರಂದು ರಥೋತ್ಸವ, 14ರಂದು ದೀಪೋತ್ಸವ ಮತ್ತು ಐದು ಮೇಳಗಳಿಂದ ಯಕ್ಷಗಾನ ಸೇವೆಯಾಟ ಪ್ರದರ್ಶನವಾಗಲಿದೆ.

12ರ ಕುಂಭಸಂಕ್ರಮಣದಂದು ರಾತ್ರಿ ಕೆಂಡಸೇವೆ ನಡೆಯಲಿದೆ.
14ರಂದು ರಾತ್ರಿ ಕೆರೆ ದೀಪೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಅಷ್ಟಾವಧಾನ ಸೇವೆ, ಐದೂ ಮೇಳಗಳಿಂದ ಸೇವೆ ಆಟ, 15ರಂದು ಸಂಪ್ರೋಕ್ಷಣೆ ನಡೆಯಲಿದೆ.

ಕೆಂಡಸೇವೆಯ ಪ್ರಯುಕ್ತ ರಾತ್ರಿ 7 ಘಂಟೆಯ ತನಕ ದೇವರ ದರ್ಶನ ಮತ್ತು ಸೇವೆಗಳಿಗೆ ಅವಕಾಶವಿದೆ.

ಸೇವಾಕರ್ತರು ಅದರ ಒಳಗೆ ದೇವರ ದರ್ಶನ ಮಾಡಿ ಮತ್ತು ಸೇವೆ ಮಾಡಿಸಿಕೊಳ್ಳಬೇಕು. ಕೆಂಡ ಸೇವೆಯ ನಂತರ ಇತರ ಭಕ್ತರಿಗೆ ದೇವರ ದರ್ಶನ ಮತ್ತು ಸೇವೆಗಳಿಗೆ ಅವಕಾಶವಿದೆ ಎಂದು ದೇವಸ್ಥಾನದ ಆಡಳಿತ ಮೊಕೇಸರ ಎಚ್.ಧನಂಜಯ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ ತಿಳಿಸಿದ್ದಾರೆ.