Join The Telegram | Join The WhatsApp |
ಬೆಳಗಾವಿ :
ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನಿಷೇದಾಜ್ಞೆ ಹೊರಡಿಸಿದ್ದಾರೆ.
ಸಿಆರ್ ಪಿಸಿ ಕಲಂ 144(3)ಅನ್ವಯ ಜಿಲ್ಲಾಧಿಕಾರಿಗಳು ಇದೀಗ ನಿಷೇಧ ಹೇರಿದ್ದಾರೆ. ಕಾನೂನು ವ್ಯವಸ್ಥೆ ಕಾಪಾಡಲು, ಜನರ ಆಸ್ತಿಪಾಸ್ತಿ ಹಾನಿ ತಪ್ಪಿಸುವ ಉದ್ದೇಶದಿಂದ ಈ ಸಿಆರ್ ಪಿಸಿ ಅನ್ವಯವಾಗಲಿದೆ. ಡಿಸೆಂಬರ್ 19 ರಂದು ಕರ್ನಾಟಕ ವಿಧಾನ ಮಂಡಲದ ವಿಶೇಷ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಅಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ ನಡೆಸುತ್ತದೆ. ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಆಗಮಿಸಿ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಬೆಳಗಾವಿ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.
Join The Telegram | Join The WhatsApp |