Join The Telegram | Join The WhatsApp |
ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳು ಮತ್ತು 3 ವಿಭಾಗಗಳನ್ನು ರಚಿಸಲಾಗಿದೆ, ಹೊಸ ಜಿಲ್ಲೆಗಳ ಹೆಸರುಗಳನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೊಡ್ಡ ಘೋಷಣೆ ಮಾಡಿದ್ದಾರೆ. ಹೊಸ ಜಿಲ್ಲೆಗಳನ್ನು ಘೋಷಿಸಲಾಗಿದ್ದು, ಇದರೊಂದಿಗೆ ಮೂರು ಹೊಸ ವಿಭಾಗಗಳನ್ನು ರಚಿಸಲಾಗಿದೆ. ರಾಜಸ್ಥಾನದಲ್ಲಿ ಹೊಸ ಜಿಲ್ಲೆಗಳ ಬೇಡಿಕೆ ಬಹಳ ದಿನಗಳಿಂದ ಹೆಚ್ಚುತ್ತಲೇ ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಹೊಸ ಜಿಲ್ಲೆಗಳನ್ನು ಘೋಷಿಸಿದೆ, ಈಗ ಮೂರು ಹೊಸ ಜಿಲ್ಲೆಗಳ ಜೊತೆಗೆ ರಾಜಸ್ಥಾನದಲ್ಲಿ ಒಟ್ಟು 50 ಜಿಲ್ಲೆಗಳು ಇರುತ್ತವೆ.
ಜೈಪುರ:
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಶುಕ್ರವಾರ 19 ಹೊಸ ಜಿಲ್ಲೆಗಳನ್ನು ರಚಿಸಿದ್ದಾರೆ. ಜತೆಗೆ ರಾಜ್ಯವನ್ನು ಮೂರು ವಿಭಾಗಗಳನ್ನಾಗಿ ಗುರುತಿಸಲಾಗಿದೆ.
ಹೊಸ ಜಿಲ್ಲೆಗಳು: ಅನೂಪ್‌ಗಢ, ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್ ನಗರ, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೇಕ್ರಿ, ಕೊಟ್‌ಪುಟ್ಲಿ, ಖೈರ್ತಾಲ್, ನೀಮ್ಕಥಾನ, ಫಲೋಡಿ, ಸಾಲುಂಬರ್, ಸಂಚೋರ್, ಶಹಪುರ (ಭಿಲ್ವಾರ).
ಈ ಹೊಸ 19 ಜಿಲ್ಲೆಗಳೊಂದಿಗೆ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದರು.
ಇನ್ನು ರಾಜಸ್ಥಾನವನ್ನು ಬನ್‌ಸ್ವಾರಾ, ಪಾಲಿ, ಸಿಕಾರ್ ಎಂದು ಮೂರು ವಿಭಾಗಗಳಾಗಿ ಗುರುತಿಸಲಾಗಿದೆ.
Join The Telegram | Join The WhatsApp |