ಮಂಗಳೂರು : ನಗರದ ಕದ್ರಿಯ ಮಲ್ಲಿಕಾ ಕಲಾವೃಂದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆ ಅಂಗವಾಗಿ ದೇವಸ್ಥಾನದ ನೂತನ ವೇದಿಕೆಯಲ್ಲಿ ಜ.13ರಿಂದ 22ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.
ಮಲ್ಲಿಕಾ ಕಲಾವೃಂದ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 10 ದಿನಗಳಲ್ಲಿ 110 ತಂಡಗಳ 3,000 ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಈ ವರ್ಷ ಬಾಲ, ಯುವ, ಮಹಿಳಾ ಪ್ರತಿಭೋತ್ಸವ, ಕನ್ನಡ-ತುಳು ನಾಟಕೋತ್ಸವ, ಪೌರಾಣಿಕ, ಚಾರಿತ್ರಿಕ ನಾಟಕ, ತೊಗಲು ಗೊಂಬೆಯಾಟ, ನೆರಳಿನಾಟ, ಯಕ್ಷಗಾನ ಗೊಂಬೆಯಾಟ,
ಯಕ್ಷಗಾನ, ನೃತ್ಯೋತ್ಸವ, ಹರಿಕಥೆ, ಪ್ರವಚನ, ಇಂದ್ರಜಾಲ ಪ್ರದರ್ಶನ, ದಾಸರಗೀತೆ, ಯೋಗಾಸನ ಪ್ರದರ್ಶನ ಮುಂತಾದ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದರು.ಯುವ ತಂಡಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಎಳೆಯ ಕಲಾವಿದರ ಪ್ರತಿಭಾ ವಿಕಸನ ಹಿನ್ನೆಲೆಯಲ್ಲಿ 15 ವರ್ಷದ ಒಳಗಿನ ಬಾಲ ಕಲಾವಿದರ ಗಾಯನ ಕಾರ್ಯಕ್ರಮ ಸಂಯೋಜಿಸಲಾಗಿದೆ. ವಿವಿಧ ಕಲಾರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯರನ್ನು ಎಂದರು. ಸನ್ಮಾನಿಸಲಾಗುತ್ತಿದೆ
ಸಂಸ್ಥೆಯ ಪೋಷಕರಾದ ರವೀಂದ್ರ ಶೇಟ್, ದಾಮೋದರ ರೈ, ವಾದಿರಾಜ ಆಚಾರ್, ಮಹಿಳಾ ಪ್ರತಿನಿಧಿ ಸುಮಾ ಪ್ರಸಾದ್, ರವಿ ಅಲೆವೂರಾಯ ವರ್ಕಾಡಿ ಇದ್ದರು.