ಸೈಕಲ್ ಭೀಷ್ಮ ಎಂದೇ ಖ್ಯಾತಿ ಪಡೆದಿರುವ ಕುಂದಾಪುರ ಮೂಲದ ಸಂಕೇಶ್ವರದಲ್ಲಿ ನೆಲೆಸಿರುವ 73 ವರ್ಷ ಪ್ರಾಯದ ರಮೇಶ ಪೂಜಾರಿ ಅವರು ಮಕ್ಕಳು ಮುಂದಿನ ಭವಿಷ್ಯ ಎಂಬ ಸಂದೇಶದೊಂದಿಗೆ ಬೆಳಗಾವಿಯಿಂದ ಹೊರಟು ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ದೇವರ ಆಶೀರ್ವಾದ ಪಡೆದು ಅಲ್ಲಿಂದ ಬಿ.ಸಿ. ರೋಡ್ ನ ಕೇಂದ್ರದ ಮಾಜಿ ಹಣಕಾಸು ಮಂತ್ರಿ, ಬಿಲ್ಲವ ಸಮಾಜದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಮತ್ತೆ ವಾಪಾಸ್ ಒಟ್ಟು 1000 ಕಿಮೀ ಕ್ರಮಿಸಿ ಬೆಳಗಾವಿಗೆ ಸೈಕಲ್ ಮೂಲಕ ಇಂದು 13/02/2024 ತಲುಪಿದ್ದಾರೆ.
ಅವರನ್ನು ಬಿಲ್ಲವ ಸಂಘದ ಅಧ್ಯಕ್ಷ ಸುನಿಲ್ ಪೂಜಾರಿ ಹಾಗೂ ಸದಸ್ಯರು, ಹೋಟೆಲ್ ಅಸೋಷಿಯೇಶನ್ ಮಾಜಿ ಅಧ್ಯಕ್ಷ ವಿಜಯ ಸಾಲಿಯಾನ್ ಬರಮಾಡಿಕೊಂಡರು.