ಸುಬ್ರಹ್ಮಣ್ಯ: ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ಗರಡಿಯಲ್ಲಿ ಆದಿ ಬೈದೇರುಗಳ ನೇಮೋತ್ಸವದ ಪ್ರಯುಕ್ತ ಶುಕ್ರವಾರ ಭಂಡಾರ ಹಿಡಿದು ದರ್ಶನ ಸೇವೆ ನೆರವೇರಿತು.

ಎಣ್ಮೂರು ಕಟ್ಟಬೀಡಿನಿಂದ ಭಂಡಾರ ಹಿಡಿದು ಬೀಡಿನಲ್ಲಿ ದರ್ಶನ ಸೇವೆ, ಬಳಿಕ ಗರಡಿಗೆ ಭಂಡಾರ ತೆರಳಿ ಗರಡಿಯಲ್ಲಿ ದರ್ಶನ ಸೇವೆ ನಡೆಯಿತು.
ಅನ್ನಸಂತರ್ಪಣೆ ನೆರವೇರಿತು.

ಗುರುವಾರ ಬೆಳಿಗ್ಗೆ ನಾಗ ತಂಬಿಲದ ಬಳಿಕ ತೋರಣ ಮುಹೂರ್ತ ನೆರವೇರಿತು. ಶುಕ್ರವಾರ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು, ನೇತ್ರಾದಿ ಗರಡಿಯಲ್ಲಿ ದರ್ಶನ ನಡೆಯಿತು.