ಕನಕಗಿರಿ: ಉತ್ತರ ಕರ್ನಾಟಕದಲ್ಲಿ ವೈಶಿಷ್ಟ್ಯವಾಗಿ ನಡೆಯುವ ಮೊಹರಂ ಮಾದರಿಯಲ್ಲೆ ಕೌಡೇಪೀರ ದೇವರುಗಳ ಸವಾರಿ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಸಿಹಿ ಸುದ್ದಿ ಸಿಕ್ಕಿದೆ. ಕೌಡೇಪೀರ ದೇವರ ಸವಾರಿ ವೇಳೆ ದರ್ಶನ್ ಅಭಿಮಾನಿಗಳು ಪಂಜಾ ಹೊತ್ತ ಮುಜಾವರರಿಗೆ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಎಂದು ಪ್ರಶ್ನೆ ಕೇಳಿದಾಗ, ಇನ್ನೆರಡು ಅಥವಾ 3 ತಿಂಗಳಲ್ಲಿ ಹೊರಗಡೆ ಬರುತ್ತಾರೆ ಎಂದು ದರ್ಶನ್ ಹೆಸರೇಳದೆ ಹಿಂದಿ-ಉರ್ದು ಮಿಶ್ರಿತ ಭಾಷೆಯ ಮೂಲಕ ಕೌಡೇಪೀರ ಹೇಳಿಕೆ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.