ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಅನುಮತಿ ನೀಡಿದೆ.

ಅನುಮತಿ ಕೋರಿ ಪೊಲೀಸರು ಹಾಗೂ ಜೈಲಾಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ದರ್ಶನ್ ಜತೆಗೆ ಬೇರೆ ವಿಚಾರಣಾಧೀನ ಕೈದಿಗಳನ್ನೂ ಬೇರೆಡೆ ಸ್ಥಳಾಂತರ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.

ವಿಶೇಷ ಆತಿಥ್ಯಕ್ಕೆ ಸಂಬಂಧಿಸಿದಂತೆ ದಾಖಲಾದ ಮೂರು ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್ ಮೊದಲ ಆರೋಪಿ ಆಗಿದ್ದಾರೆ. ಅದರ ತನಿಖೆಗೆ ಮೂರು ತಂಡ ರಚಿಸಲಾಗಿದೆ.

ನಟ ದರ್ಶನ್ ಬಳ್ಳಾರಿ ಜೈಲು ಹಾಗೂ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಉಳಿದಂತೆ
ಜಗದೀಶ್ ಶಿವಮೊಗ್ಗ ಮತ್ತು ಧನರಾಜ್ ಧಾರವಾಡ, ವಿನಯ್ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ನಾಗರಾಜ್ ಗುಲ್ಬರ್ಗ , ಲಕ್ಷ್ಮಣ ಶಿವಮೊಗ್ಗ, ಪ್ರದೂಶ್ ಬೆಳಗಾವಿಗೆ ಸ್ಥಳಾಂತರ ಆಗಲಿದ್ದು, ಪವಿತ್ರಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಇರಲಿದ್ದಾರೆ. ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿ ಇದ್ದಾರೆ. ಕೋರ್ಟ್ ಆದೇಶ ಹಿಂದೆ ಕೈ ಸೇರಿದರೆ ರಾತ್ರಿಯೇ ಸ್ಥಳಾಂತರ ಆಗುವ ಸಾಧ್ಯತೆ ಇದೆ. ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ಆದರೆ ಉತ್ತಮ ಎನ್ನಲಾಗಿದೆ. ಇಂದು ಮಂಗಳವಾರ ಆದೇಶ ಪ್ರತಿ ಕೈ ಸೇರಿದರೆ ರಾತ್ರಿಯೇ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಲಿದ್ದಾರೆ. ಆದೇಶ ಪ್ರತಿ ನಾಳೆ ಬೆಳಗ್ಗೆ ಕೈ ಸೇರಿದರೆ, 11 ಗಂಟೆಗೆ ಬಳ್ಳಾರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಿದ್ದಾರೆ.