ಬೆಳಗಾವಿ :
“ಬಿಜೆಪಿ ಶಾಸಕರಾದ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿಲ್ಲ. ನಾವು ಆಹ್ವಾನ ನೀಡಿದ್ದ ಭೋಜನಕೂಟಕ್ಕೆ ಬಂದಿದ್ದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸುವರ್ಣಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದರು.
ಇತರೇ ಪಕ್ಷದವರು ಊಟಕ್ಕೆ ಬಂದಿದ್ದರೇ ಎಂದು ಮಾಧ್ಯಮಗಳು ಕೇಳಿದಾಗ “ಹೌದು, ವಿಶ್ವನಾಥ್ ಅವರು ಸೇರಿದಂತೆ ಅನ್ಯ ಪಕ್ಷದ 10 ಶಾಸಕರು ಉಪಹಾರ ಕೂಟಕ್ಕೆ ಬಂದಿದ್ದರು” ಎಂದರು.
ಅನ್ಯ ಪಕ್ಷದ ಶಾಸಕರು ಸಿಎಲ್ ಪಿ ಸಭೆಗೆ ಬಂದಿದ್ದರೇ ಎಂದು ಕೇಳಿದಾಗ “ಅವರು ಏಕೆ ನಮ್ಮ ಶಾಸಕಾಂಗ ಸಭೆಗೆ ಬರುತ್ತಾರೆ. ಅವರು ನಮ್ಮ ಪಕ್ಷದ ಶಾಸಕರಲ್ಲ. ಹೀಗಾಗಿ ಅವರು ನಮ್ಮ ಶಾಸಕಾಂಗ ಸಭೆಗೆ ಬಂದಿಲ್ಲ” ಎಂದು ತಿಳಿಸಿದರು.
ನಿಮ್ಮ ಮೇಲಿರುವ ಸಿಬಿಐ ವಿಚಾರಣೆ ಹಿಂಪಡೆದ ವಿಚಾರವನ್ನು ಬಿಜೆಪಿ ಸದನದಲ್ಲಿ ಪ್ರಸ್ತಾವನೆ ಮಾಡಲು ತಯಾರಿ ನಡೆಸಿದೆ ಎಂದು ಕೇಳಿದಾಗ “ಪ್ರಸ್ತಾವನೆ ಮಾಡಲಿ, ಕಾನೂನಿದೆ. ಬೇಡ ಎಂದು ಹೇಳಿದವರು ಯಾರು? ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲಾಗಿದೆ. ಅವರಿಗೆ ಶುಭವಾಗಲಿ” ಎಂದು ಹೇಳಿದರು.
[12/14, 5:26 PM] S: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ : ಸೋಮಶೇಖರ್, ಶಿವರಾಂ ಹೆಬ್ಬಾರ್ ಬಂದಿದ್ದು ಕಾಂಗ್ರೆಸ್ ಪಕ್ಷದ ಸಭೆಗಲ್ಲ, ಭೋಜನ ಕೂಟಕ್ಕಂತೆ !