ಬೆಳಗಾವಿ : ಕೆಎಲ್ ಇ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಚರ್ಚಾ ವಿಭಾಗದ ವತಿಯಿಂದ “ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಶಿಕ್ಷಣ ಅರ್ಹತೆ ಅತ್ಯಗತ್ಯ” ಎಂಬ ವಿಷಯದ ಕುರಿತು ಅಂತರ್ ಕಾಲೇಜು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯು ರಾಜಕೀಯ ನಾಯಕರಿಗೆ ಶೈಕ್ಷಣಿಕ ಅರ್ಹತೆಯ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ.
ಡಿಎಡ್ ಕಾಲೇಜು ಪ್ರಾಚಾರ್ಯ ಶಿವಾನಂದ ನಿರ್ವಾಣಿ ಮತ್ತು ಬೆಳಗಾವಿಯ ಆರ್.ಎಲ್ ವಿಜ್ಞಾನ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಿಲನ್ ಬಾಗಿ ಉಪಸ್ಥಿತರಿದ್ದರು. ಪ್ರಾಚಾರ್ಯೆ ಡಾ.ಜ್ಯೋತಿ ಜಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಒಟ್ಟು 19 ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಲೇಜು ಆಡಳಿತ ಮಂಡಳಿಯು ಎಲ್ಲಾ ಸಂಯೋಜಕರಿಗೆ ಮತ್ತು ಆಯಾ ಪದವಿ ಕಾಲೇಜುಗಳ ಪ್ರಾಚಾರ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಬೆಳಗಾವಿ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಚರ್ಚಾ ವಿಭಾಗದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜೇತರು (ಇಂಗ್ಲಿಷ್ ಮಾಧ್ಯಮ)
1.ಕೆಎಲ್ಇಎಸ್ ಕಾನೂನು ಕಾಲೇಜು, ಚಿಕ್ಕೋಡಿ -ಪ್ರಥಮ ಸ್ಥಾನ
2.ಗೋಗಟೆ ಕಾಲೇಜ್ ಆಫ್ ಕಾಮರ್ಸ್, ಬೆಳಗಾವಿ- ದ್ವಿತೀಯ ಸ್ಥಾನ
3.ಆರ್.ಎಲ್. ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಳಗಾವಿ- ತೃತೀಯ ಸ್ಥಾನವಿಜೇತರು (ಕನ್ನಡ ಮಾಧ್ಯಮ)
1.ಆರ್.ಎಲ್.ಕಾನೂನು ಕಾಲೇಜು, ಬೆಳಗಾವಿ- ಪ್ರಥಮ ಸ್ಥಾನ
2.ಕೆಎಲ್ ಇಎಸ್ ಕಾನೂನು ಕಾಲೇಜು, ಚಿಕ್ಕೋಡಿ- ದ್ವಿತೀಯ ಸ್ಥಾನ
3.ಕೆಎಲ್ಇಎಸ್ ಜಿ.ಕೆ ಕಾನೂನು ಕಾಲೇಜು, ಹುಬ್ಬಳ್ಳಿ- ತೃತೀಯ ಸ್ಥಾನ