ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಸಂಬಂಧಿಸಿ ಏಳು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಎಂ.ವಿಶಾಲಾಕ್ಷಿ ಈ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 7, ಬಿಜೆಪಿಯಿಂದ ಮೂವರು, ಜೆಡಿಎಸ್ ಪಕ್ಷದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ನಿಂದ ಏಳು ಮಂದಿ ಕಣದಲ್ಲಿದ್ದು, ಐವಾನ್ ಡಿಸೋಜಾ, ಕೆ ಗೋವಿಂದರಾಜ್, ಜಗದೇವ್ ಗುತ್ತೇದಾ‌ರ್, ಬಿಲ್ಮೀಷ್ ಬಾನು, ಎನ್ ಎಸ್‌ ಬೋಸರಾಜು, ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಎ. ವಸಂತಕುಮಾ‌ರ್ ನಾಮಪತ್ರ ಸಲ್ಲಿಸಿದ್ದರು ಬಿಜೆಪಿಯಿಂದ ಮೂವರು ಕಣದಲ್ಲಿದ್ದು, ಸಿ ಟಿ ರವಿ, ಮಾರುತಿರಾವ್‌ ಮುಳೆ ಹಾಗೂ ಎನ್ ರವಿಕುಮಾ‌ರ್ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ನಿಂದ ಟಿ. ಎನ್.ಜವರಾಯಿ ಗೌಡ ನಾಮಪತ್ರ ಸಲ್ಲಿಸಿದ್ದು ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.