ಬೆಳಗಾವಿ : ಆರ್ ಸಿಬಿ ಈ ಸಲ ಐಪಿಎಲ್ ಗೆಲ್ಲಲಿ. ಗೆದ್ದರೆ ರಜೆ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿವಾನಂದ ಮಲಲನ್ನವರ ಎಂಬುವವರು ಸಿಎಂಗೆ ಪತ್ರ ಬರೆದಿದ್ದಾರೆ. ” ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಹೋಗಿ ಕಪ್‌ ಗೆದ್ದರೆ ಕರ್ನಾಟಕ ಸರ್ಕಾರರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ದಿನವನ್ನು ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್‌ ಹಬ್ಬವೆಂದು ಅಧಿಕೃತವಾಗಿ ಘೋಷಣೆ ಮಾಡಬೇಕು. ಪ್ರತಿ ವರ್ಷ ಸರ್ಕಾರಿ ರಜೆಯನ್ನು ನೀಡಬೇಕು ” ಎಂದು ಪತ್ರದಲ್ಲಿ ಅಭಿಮಾನಿ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ಜಿಲ್ಲೆಯಲ್ಲಿ
ಆರ್‌ಸಿಬಿ ಪ್ಯಾನ್ಸ್‌ ಹಬ್ಬವನ್ನು ಪ್ರತಿ ಜಿಲ್ಲೆಯಲ್ಲಿ ಆಚರಿಸಲು ಸರ್ಕಾರ ಅನುವು ಮಾಡಬೇಕು. ಇದಕ್ಕೆ ಅಗತ್ಯ ಅನುಮತಿಯನ್ನು ನೀಡಬೇಕು ಎಂದು ತಂಡದ ಅಭಿಮಾನಿ ವಿನಂತಿ ಮಾಡಿದ್ದಾರೆ.

ಈ ಪತ್ರ ಎಲ್ಲೆಡೆ ವೈರಲ್‌ಆರ್‌ಸಿಬಿ ಅಭಿಮಾನಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಈ ಪತ್ರವು ಟ್ವೀಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌, ವ್ಯಾಟ್ಸಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 

ಗುರುವಾರ ಮಹತ್ವದ ಪಂದ್ಯಸದ್ಯ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಪಂಜಾಬ್‌ ತಂಡ ಎದುರಾಗಲಿದೆ. ಆರ್‌ಸಿಬಿ ಪಂದ್ಯವನ್ನು ಗೆದ್ದಿದೆ. ಈ ಮೂಲಕ ನೇರವಾಗಿ ಫೈನಲ್‌ ಪ್ರವೇಶಿಸಿದೆ.

ವಿರಾಟ್‌ ಜರ್ಸಿ ನಂಬರ್‌ 18 ಲಕ್ಕಿ ಎನ್ನುವ ಫ್ಯಾನ್ಸ್‌ವಿರಾಟ್‌ ಕೊಹ್ಲಿ ಅವರ ಜರ್ಸಿ ನಂಬರ್‌ 18 ಆಗಿದ್ದು, ಈ ಬಾರಿ ಐಪಿಎಲ್‌ 18 ನೇ ಆವೃತ್ತಿ ನಡೆಯುತ್ತಿದೆ. 18 ನಮಗೆ ಲಕ್ಕಿಯಾಗಿದ್ದು, ಈ ಬಾರಿ ಕಪ್‌ ಗೆದ್ದೇ ಗೆಲ್ಲುತ್ತೇವೆ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.