Join The Telegram | Join The WhatsApp |
ನವದೆಹಲಿ-
ಕಳೆದ 15-20 ದಿನಗಳಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ತೀವ್ರ ಕುಸಿತವಾಗಿದೆ. ಮಾಹಿತಿ ಪ್ರಕಾರ ಕಳೆದ 15-20 ದಿನಗಳಲ್ಲಿ ಸೋಯಾಬೀನ್ ಎಣ್ಣೆ ಬೆಲೆ 14 ರೂ. ತಾಳೆ ಎಣ್ಣೆ ಬೆಲೆ ಸುಮಾರು 6 ರೂಪಾಯಿ ಇಳಿಕೆಯಾಗಿದೆ.ಸೂರ್ಯಕಾಂತಿ ಎಣ್ಣೆ ಬೆಲೆ 10 ರೂಪಾಯಿ ಇಳಿಕೆಯಾಗಿದೆ.
ಸೋಯಾ, ರೈಸ್ ಬ್ರೌನ್ ಆಯಿಲ್, ಸಾಸಿವೆ, ಎಣ್ಣೆ ಹಾಗೂ ವನಸ್ಪತಿ ಬೆಲೆಯಲ್ಲೂ ಲೀಟರಿಗೆ ತಲಾ 10-15 ರೂ. ಇಳಿಕೆಯಾಗಿದೆ. ಕಳೆದ ಕಳೆದ ಸಾಲಿನ ಮಾರ್ಚ್- ಏಪ್ರಿಲ್‌ಗೆ ಹೋಲಿಸಿದರೆ ಲೀಟರ್‌ಗೆ ಅಂದಾಜು ಒಟ್ಟು 20-25 ರೂ. ನಷ್ಟು ಇಳಿಕೆಯಾದಂತಾಗಿದೆ.
ಮಲೇಷ್ಯಾ, ಇಂಡೋನೇಷ್ಯಾ ಮೂಲದ ತಾಳೆ ಎಣ್ಣೆ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆಯಲ್ಲಿ ಲೀಟರ್‌ಗೆ 10-15 ರೂ. ಇಳಿಯಲಿದೆ ಎಂದು ಸಗಟು ಖಾದ್ಯ ತೈಲ ವ್ಯಾಪಾರಿಗಳು ಹೇಳಿದ್ದಾರೆ.
ಮಲೇಷಿಯಾ, ಇಂಡೋನೇಷ್ಯಾದಲ್ಲಿ ದರ ಇಳಿಕೆಯ ಹಿನ್ನೆಲೆಯಲ್ಲಿ ಭಾರತವು ಕಳೆದ 11 ತಿಂಗಳಲ್ಲಿ 17.12 ಲಕ್ಷ ಟನ್‌ನಷ್ಟು ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಂಡಿದೆ. ಇದರೊಂದಿಗೆ ಆಮದಿನ ಪ್ರಮಾಣ ಎರಡೂವರೆ ಪಟ್ಟು ಏರಿಕೆಯಾಗಿದೆ ಎಂದು ಕೈಗಾರಿಕಾ ಸಂಸ್ಥೆ SEA ತಿಳಿಸಿದೆ. ಭಾರತ, 2021-22 ನವೆಂಬರ್-ಸೆಪ್ಟೆಂಬರ್ ಅವಧಿಯಲ್ಲಿ 130.1 ಲಕ್ಷ ಟನ್ ತೈಲವನ್ನು ಆಮದು ಮಾಡಿದೆ.
Join The Telegram | Join The WhatsApp |