ನವದೆಹಲಿ: ಹಗಲಿನಲ್ಲಿ ಈತ ಉತ್ತರ ಪ್ರದೇಶದ ನೋಯ್ಡಾದ ಖಾಸಗಿ ಕಂಪನಿಯಲ್ಲಿ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ ರಾತ್ರಿಯಲ್ಲಿ ಆತ್ಮ-ಶೋಧನೆಯ ಪ್ರವಾಸಕ್ಕೆಂದು ಭಾರತಕ್ಕೆ ಬರುವ ಅಮೆರಿಕ ಮೂಲದ ಮಾಡೆಲ್ ಆಗಿ ಬದಲಾಗುತ್ತಿದ್ದ. ಆತನ ಹಗಲಿನ ಕೆಲಸವು ಆತನಿಗೆ ಜೀವನ ಭದ್ರತೆ ನೀಡಿದರೆ ರಾತ್ರಿಯ ಚಟುವಟಿಕೆಗಳು ಬ್ಲ್ಯಾಕ್‌ಮೇಲ್ ಮೂಲಕ ಹಣ ಮಾಡುವ ದಂಧೆಯಾಯಿತು. ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡೆಲ್ ಎಂದು ಬಿಂಬಿಸಿಕೊಂಡು 700 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಆರೋಪದ ಮೇಲೆ 23 ವರ್ಷದ ತುಷಾರ ಸಿಂಗ್ ಬಿಶ್ತ್ ಎಂಬಾತನನ್ನು ಶುಕ್ರವಾರ ಪೂರ್ವ ದೆಹಲಿಯ ಶಕರಪುರ ಪ್ರದೇಶದಲ್ಲಿ ಬಂಧಿಸಲಾಗಿದೆ.

ದೆಹಲಿಯ ನಿವಾಸಿಯಾಗಿರುವ ತುಷಾರ ಸಿಂಗ್‌ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (ಬಿಬಿಎ) ಪದವಿ ಪಡೆದಿದ್ದಾನೆ. ಕಳೆದ ಮೂರು ವರ್ಷಗಳಿಂದ ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ.

ಆತನ ತಂದೆ ಚಾಲಕರಾಗಿ ಕೆಲಸ ಮಾಡುತ್ತಾರೆ, ತಾಯಿ ಗೃಹಿಣಿ, ಮತ್ತು ಸಹೋದರಿ ಗುರುಗ್ರಾಮದಲ್ಲಿ ಉದ್ಯೋಗಿಯಾಗಿದ್ದಾರೆ. ತುಷಾರಗೆ ಒಳ್ಳೆಯ ಕೆಲಸವಿದ್ದರೂ ಆತನ ಸೈಬರ್ ಅಪರಾಧದ ಜಗತ್ತಿಗೆ ಪ್ರವೇಶಿಸಿದ. ಹೆಚ್ಚಾಗಿ ಹಣದ ಮೇಲಿನ ದುರಾಸೆ ಮತ್ತು ಹೆಂಗಸರ ಮೇಲೆ ಹುಚ್ಚಿಗೆ ಬಿದ್ದು ಬ್ಲ್ಯಾಕ್‌ ಮೇಲರ್‌ ಆದ.

ಆ್ಯಪ್ ಮೂಲಕ ಪಡೆದ ವರ್ಚುವಲ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಬಳಸಿಕೊಂಡು ಈತ ಜನಪ್ರಿಯ ಡೇಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಬಂಬಲ್ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸಿದ್ದಾನೆ. ಆತ ಬ್ರೆಜಿಲಿಯನ್ ಮಾಡೆಲ್‌ನ ಕದ್ದ ಫೋಟೋಗಳು ಮತ್ತು ನಕಲಿ ವ್ಯಕ್ತತ್ವದಿಂದ ಭಾರತಕ್ಕೆ ಭೇಟಿ ನೀಡುವ ಅಮೆರಿಕ ಮೂಲದ ಮಾಡೆಲ್‌ ನಂತೆ ಪೋಸ್ ನೀಡಿದ್ದ. ಆತನ ಟಾರ್ಗೆಟ್‌ ಪ್ರಾಥಮಿಕವಾಗಿ 18ರಿಂದ 30 ವರ್ಷ ವಯಸ್ಸಿನ ಮಹಿಳೆಯರಾಗಿದ್ದು, ಈ ವೇದಿಕೆಗಳ ಮೂಲಕ ಅವರ ಸ್ನೇಹ ಬೆಳೆಸುತ್ತಿದ್ದ.
ಒಮ್ಮೆ ಅವರ ವಿಶ್ವಾಸ ಗಳಿಸಿದ ನಂತರ, ತುಷಾರ ಸಿಂಗ್‌ ಸ್ನೇಹದ ನೆಪದಲ್ಲಿ ಅವರ ಫೋನ್ ಸಂಖ್ಯೆಗಳನ್ನು ಕೇಳುತ್ತಿದ್ದ. ಹಾಗೂ ಫೋಟೋಗಳು ಅಥವಾ ವೀಡಿಯೊಗಳನ್ನು ಒಟ್ಟಿಗೆ ತೆಗೆಸಿಕೊಳ್ಳುವಂತೆ ವಿನಂತಿಸುತ್ತಿದ್ದ. ಶೀಘ್ರದಲ್ಲೇ ಸ್ವದೇಶಕ್ಕೆ ಮರಳುತ್ತೇನೆ. ನೀವು ಸುಂದರವಾಗಿದ್ದೀರಿ.. ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಹೇಳಿ ಈತ ಕ್ರಮೇಣ ಅವರೊಂದಿಗೆ ಆತ್ಮೀಯ ಸಲುಗೆ ಬೆಳೆಸಿಕೊಂಡು ಅವರಿಂದ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ತನಗೆ ಕಳುಹಿಸುವಂತೆ ಕೇಳುತ್ತಿದ್ದ. ಆತನನ್ನು ನಂಬಿದ ಯುವತಿಯರು ಮತ್ತು ಮಹಿಳೆಯರು ಆತನಿಗೆ ವಿಡಿಯೋ ಮತ್ತು ಫೋಟೋ ಕಳುಹಿಸಿದರೆ ಅದನ್ನೇ ಇಟ್ಟುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಅವರಿಂದ ಸಾಧ್ಯವಾದಷ್ಟೂ ಹಣ ಪೀಕುತ್ತಿದ್ದ ಎನ್ನಲಾಗಿದೆ.

ಪೊಲೀಸರ ಪ್ರಕಾರ, ತುಷಾರ್ ಈ ದೃಶ್ಯಗಳನ್ನು ಬಳಸಿಕೊಂಡು ಹಣಕ್ಕಾಗಿ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ. ಅವರು ತನ್ನ ಬೇಡಿಕೆಗಳನ್ನು ನಿರಾಕರಿಸಿದರೆ, ಆತ ಈ ಫೋಟೋ ಹಾಗೂ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
ಪೊಲೀಸ್ ತನಿಖೆ ಪ್ರಕಾರ, ತುಷಾರ ಸಿಂಗ್‌ ಬಿಶ್ತ್‌ ಬಂಬಲ್‌ನಲ್ಲಿ 500 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಮತ್ತು ಸ್ನ್ಯಾಪ್‌ಚಾಟ್ ಮತ್ತು ವಾಟ್ಸಾಪ್‌ನಲ್ಲಿ 200 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದ್ದ. ಎರಡನೇ ವರ್ಷದ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬರು ಡಿಸೆಂಬರ್ 13ರಂದು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಈತನ ಪ್ರಕರಣಗಳು ಬೆಳಕಿಗೆ ಬಂದತು. ಅದೇ ವರ್ಷದ ಜನವರಿಯಲ್ಲಿ ಅವಳು ಬಂಬಲ್‌ನಲ್ಲಿ ತುಷಾರ ಜೊತೆ ಸಂಪರ್ಕಕ್ಕೆ ಬಂದಾಗ ಾತ ತಾನು ಅಮೆರಿಕ US-ಮೂಲದ ಮಾಡೆಲ್ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ವಾಟ್ಸಾಪ್‌ (WhatsApp( ಮತ್ತು ಸ್ನ್ಯಾಪ್‌ ಶಾಟ್‌ (Snapchat)ನಲ್ಲಿ ಖಾಸಗಿ ಚಾಟ್‌ಗಳಿಗೆ ಪರಿವರ್ತನೆಗೊಂಡ ಸ್ನೇಹವನ್ನು ಸಂಪಾದಿಸಿದ್ದಾನೆ.

ಇವರಿಬ್ಬರು ವೈಯಕ್ತಿಕ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಆಕೆ ವೈಯಕ್ತಿಕವಾಗಿ ಭೇಟಿಯಾಗಲು ವಿನಂತಿಸಿದಾಗ, ಆತ ಸತತವಾಗಿ ಹಲವಾರು ನೆಪ ಹೇಳಿ ಭೇಟಿಯನ್ನು ತಪ್ಪಿಸಿಕೊಂಡಿದ್ದಾನೆ. ನಂತರ ಅವಳ ಖಾಸಗಿ ವೀಡಿಯೊಗಳಲ್ಲಿ ಒಂದನ್ನು ಅವಳಿಗೆ ಕಳುಹಿಸಿದ್ದಾನೆ ಮತ್ತು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ, ಅವಳು ಹಣ ಕೊಡದಿದ್ದರೆ ವೀಡಿಯೊಗಳನ್ನು ಆನ್‌ಲೈನ್‌ ನಲ್ಲಿ ಹಂಚಿಕೊಳ್ಳುವುದಾಗಿ ಅಥವಾ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಆರಂಭದಲ್ಲಿ, ವಿದ್ಯಾರ್ಥಿನಿ ಸ್ವಲ್ಪ ಹಣ ನೀಡಿದ್ದಾಳೆ. ಆದರೆ, ತುಷಾರ ನಿರಂತರವಾಗಿ ಬೇಡಿಕೆಗಳನ್ನು ಮುಂದಿಡುತ್ತಿದ್ದಂತೆಯೇ ದೂರು ನೀಡಿದ್ದಾಳೆ.
ದೂರನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ದೆಹಲಿಯ ಸೈಬರ್ ಪೊಲೀಸ್ ಠಾಣೆ ಎಸಿಪಿ ಅರವಿಂದ ಯಾದವ್ ತನಿಖೆಗಾಗಿ ತಂಡವನ್ನು ರಚಿಸಿದರು. ತಾಂತ್ರಿಕ ವಿಶ್ಲೇಷಣೆ ಮತ್ತು ಗುಪ್ತಚರ ಮಾಹಿತಿಯನ್ನು ಆಧರಿಸಿ ತಂಡವು ತುಷಾರನ ಚಟುವಟಿಕೆಗಳನ್ನು ಪತ್ತೆಹಚ್ಚಲು ಮತ್ತು ಆತನೇ ಆರೋಪಿ ಎಂದು ಗುರುತಿಸಲು ಸಹಾಯ ಮಾಡಿತು. ಶಕರಪುರದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಲಾಯಿತು.

ಪೊಲೀಸರ ಕಾರ್ಯಾಚರಣೆಯ ಸಮಯದಲ್ಲಿ, ಆತನ ಮೊಬೈಲ್ ಫೋನ್, ಅವನ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ವರ್ಚುವಲ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮತ್ತು ವಿವಿಧ ಬ್ಯಾಂಕ್‌ಗಳಿಂದ 13 ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿ ಮತ್ತು ಹತ್ತಿರದ ಪ್ರದೇಶಗಳ ಮಹಿಳೆಯರೊಂದಿಗೆ 60 ಕ್ಕೂ ಹೆಚ್ಚು ವಾಟ್ಸಾಪ್ ಚಾಟ್ ದಾಖಲೆಗಳನ್ನು ಪೊಲೀಸರು ರಿಟ್ರೀವ್‌ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ದೂರುದಾರ ನೀಡಿದ ಯುವತಿಯನ್ನು ಮಾತ್ರವಲ್ಲದೆ, ಕನಿಷ್ಠ ನಾಲ್ವರು ಮಹಿಳೆಯರನ್ನೂ ಈತ ಸುಲಿಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ತನಿಖೆಯಲ್ಲಿ ತುಷಾರಗೆ ಸಂಬಂಧಿಸಿದ ಎರಡು ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ಒಂದು ಖಾತೆಯು ಆತ ಟಾರ್ಗೆಟ್‌ ಮಾಡಿದ ಮಹಿಳೆಯರಿಂದ ವಸೂಲಿ ಮಾಡಿದ ಹಣಗಳ ವಿವರಗಳನ್ನು ಹೊಂದಿದೆ. ಹಾಗೂ ಎರಡನೇ ಖಾತೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.