ಬೆಳಗಾವಿ : ಎಸ್ ಎಸ್ ಎಲ್ ಸಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ 2024 – 25 ನೇ ಸಾಲಿನಲ್ಲಿ ಪರೀಕ್ಷೆಗೆ ಕೂಡುತ್ತಿರುವ ವಿದ್ಯಾರ್ಥಿಗಳಿಗೆ ಎನ್ ಕಿತ್ತೂರ್ ಶಿಕ್ಷಕರು ಬರೆದಿರುವ ಪರೀಕ್ಷಾ ತೋಶಾ ಎಂಬ ಅದ್ಭುತ (ಪಾಸಿಂಗ್ ಮತ್ತು ಸ್ಕೋರಿಂಗ್ ಪ್ಯಾಕೇಜ್) ಗ್ರಂಥವನ್ನು ಹಿರೇ ಬಾಗೇವಾಡಿಯ ಜನಪ್ರಿಯ ಲಿಟಲ್ ಸ್ಟಾರ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆ ಶಾಲೆಯ ವಿದ್ಯಾರ್ಥಿಯ ಪಾಲಕ ಈರಪ್ಪ ನಂದಿಹಳ್ಳಿ ಅವರು ತಮ್ಮ ಮಗಳಾದ ಸ್ನೇಹಾ ನಂದಿಹಳ್ಳಿ ಅವರ ಇಚ್ಛೆಯಂತೆ ಎಸ್ ಎಸ್ ಎಲ್ ಸಿ ಯ ಎಲ್ಲ ಮಕ್ಕಳಿಗೆ ಉಚಿತವಾಗಿ ವಿತರಿಸಲು ಒಪ್ಪಿದರು.
ಸ್ನೇಹಾಳ ಅಭಿಪ್ರಾಯವೇನೆಂದರೆ ನಾನೊಬ್ಬಳೇ ಓದಿ ಹೆಚ್ಚು ಅಂಕ ಗಳಿಸುವುದು ಬೇಡ. ನನ್ನೆಲ್ಲ ಸಹೋದರ ಸಹೋದರಿಯರಿಗೂ ಈ ಪುಸ್ತಕವನ್ನು ಕೊಡಿಸಬೇಕು. ಈ ವಿಷಯವನ್ನು ತಮ್ಮ ಅಪ್ಪನಲ್ಲಿ ಇಟ್ಟಾಗ ಅವಳ ತಂದೆಯು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಎಲ್ಲ ಮಕ್ಕಳಿಗೆ ಗ್ರಂಥವನ್ನು ಕಾಣಿಕೆಯಾಗಿ ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಡಾ. ಎಂ ಜಿ ಏಣಿಗಿಮಠ ಸಂಸ್ಥೆಯ ಚೇರ್ಮನ್ ರವರ ನೇತೃತ್ವದಲ್ಲಿ ಗಜೇಂದ್ರ ಪವಾರ್ ಪ್ರೌಢಶಾಲೆಯ ಪ್ರಾಚಾರ್ಯರು ಎಲ್ಲ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಈ ಅದ್ಭುತ ಗ್ರಂಥವನ್ನು ವಿತರಿಸಿದರು. ಪ್ರೌಢಶಾಲೆಯ ಪ್ರಮುಖ ಟಿ ಆರ್ ತನಶಿ ಅವರು ಮಕ್ಕಳಿಗೆ ಅಭಿನಂದಿಸಿದರು.