ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಹನುಮಂತ ದೇವರ ಜಾತ್ರಾ ಕಾರ್ತಿಕೋತ್ಸವಕ್ಕೆ ಗೋಕಾಕ ಘಟಕ, ರಾಯಬಾಗ ಘಟಕ ಹಾಗೂ ಹುಕ್ಕೇರಿ ಘಟಕ, ಅಥಣಿ ಘಟಕ ಮತ್ತು ಚಿಕ್ಕೋಡಿ ಘಟಕಗಳಿಂದ ಜಾತ್ರಾ ವಿಶೇಷ ಹೆಚ್ಚುವರಿ ಬಸ್‌ ಬಿಡಬೇಕೆಂದು ಆಗ್ರಹಿಸಿ ಕಲ್ಲೋಳಿಯ ಜೈ ಹನುಮಾನ ಯುವಜನ ಸೇವಾ ಸಂಘದ ಪದಾಧಿಕಾರಿಗಳು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗೀಯ ಅಧಿಕಾರಿಗೆ ಮನವಿ ಸಲ್ಲಿಸಿದರು.ಡಿ.14 ರಿಂದ 21ರವರೆಗೆ ಜರುಗುವ ಜಾತ್ರಾಮಹೋತ್ಸವದಲ್ಲಿ ರಾಜ್ಯ ಸೇರಿ ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರಿಗೆ ಬಸ್‌ನ ಅನಾನುಕೂಲತೆ ಆಗದಂತೆ ಹೆಚ್ಚುವರಿ ಬಸ್‌ ಬಿಡಬೇಕೆಂದು ಮನವಿ ಮಾಡಿದರು. ಜೈ ಹನುಮಾನ ಯುವಜನ ಸೇವಾ ಸಂಘದ ಅಧ್ಯಕ್ಷ ಪರಶುರಾಮ ಇಮಡೆರ, ಉಪಾಧ್ಯಕ್ಷ ಮಹಾಂತೇಶ ಕಡಲಗಿ, ರಾಜಪ್ಪ ಮಾವರಕರ, ಸಿದ್ದಪ್ಪ ಪೂಜೇರಿ, ಭೀಮಶಿ ಗೋಕಾಂವಿ, ಹನುಮಂತ ತೋಟಗಿ, ಅನೀಲ ಖಾನಗೌಡ್ರ, ಸುರೇಶ ಕಲಾಲ ಮತ್ತಿತರರು ಉಪಸ್ಥಿತರಿದ್ದರು.