Join The Telegram | Join The WhatsApp |
ಮುಂಬೈ-
ತವರು ನೆಲದಲ್ಲಿ 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಮತ್ತು ಏಷ್ಯಾ ಕಪ್ ಹೊರತಾಗಿ ಭಾರತ ಎಂಟು ಟೆಸ್ಟ್, 18 ODIಗಳು ಮತ್ತು 17 T20I ಗಳನ್ನು ಆಡಲು ನಿರ್ಧರಿಸಿದೆ – ಟೆಸ್ಟ್, ODI ಮತ್ತು T20I ಪಂದ್ಯಗಳ ಸಂಪೂರ್ಣ ಪಟ್ಟಿಯ ನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಸದ್ಯ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಡಿಸೆಂಬರ್ 7 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ಏಕದಿನ ಪಂದ್ಯದ ಬಳಿಕ ಟೆಸ್ಟ್ ಆಡಲಿದೆ. ಇದು ಟೀಂ ಇಂಡಿಯಾದ ವರ್ಷ ಕೊನೆಯ ಟೆಸ್ಟ್ ಆಗಲಿದೆ. ಇದಾದ ಬಳಿಕ ಅಂದರೆ ಮುಂದಿನ ವರ್ಷ 2023 ರಲ್ಲಿ ಭಾರತ ಸಾಲು ಸಾಲು ಸರಣಿಗಳಲ್ಲಿ ಭಾಗಿಯಾಗಲಿದೆ.
2023ರಲ್ಲಿ ಭಾರತದ ಕ್ರಿಕೆಟ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ-
ಭಾರತ vs ಶ್ರೀಲಂಕಾ: ಜನವರಿ 2023
ಭಾರತ vs ನ್ಯೂಜಿಲೆಂಡ್: ಜನವರಿ–ಫೆಬ್ರವರಿ 2023
ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಫೆಬ್ರವರಿ–ಮಾರ್ಚ್ 2023
ವೆಸ್ಟ್ ಇಂಡೀಸ್ vs ಭಾರತ: ಜುಲೈ–ಆಗಸ್ಟ್ 2023 (2 ಟೆಸ್ಟ್, 3 ODI ಮತ್ತು 3 T-20 ಅಂತರಾಷ್ಟ್ರೀಯ)
ಏಷ್ಯಾ ಕಪ್ 2023 (ಪಾಕಿಸ್ತಾನ): ಸೆಪ್ಟೆಂಬರ್ 2023
ಭಾರತ vs ಆಸ್ಟ್ರೇಲಿಯಾ: ಸೆಪ್ಟೆಂಬರ್ 2023 (3 ODIಗಳು)
ICC ಪುರುಷರ ಕ್ರಿಕೆಟ್ ವಿಶ್ವಕಪ್ 2023: ಅಕ್ಟೋಬರ್ – ನವೆಂಬರ್ 2023
ಭಾರತ vs ಆಸ್ಟ್ರೇಲಿಯಾ: ನವೆಂಬರ್ – ಡಿಸೆಂಬರ್ 2023 (5 T20Is)
ಭಾರತ vs ದಕ್ಷಿಣ ಆಫ್ರಿಕಾ: ಡಿಸೆಂಬರ್ 2023 – ಜನವರಿ 2024 (2 ಟೆಸ್ಟ್, 3 ODIಗಳು ಮತ್ತು 3 T20)ರ ವರೆಗೆ ನಡೆಯಲಿದೆ.
Join The Telegram | Join The WhatsApp |