Join The Telegram | Join The WhatsApp |
ಧರ್ಮಸ್ಥಳ :
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪವಿತ್ರ ಕ್ಷೇತ್ರ ಹೊಸ ವರ್ಷದ ಹಿನ್ನೆಲೆಯಲ್ಲಿ ಫಲ ಪುಷ್ಪಲಂಕಾರಗಳಿಂದ ಕಂಗೊಳಿಸಿದೆ.
ಬೆಂಗಳೂರಿನ ಉದ್ಯಮಿ ಎಸ್. ಗೋಪಾಲ್ ರಾವ್ ಕಳೆದ 14 ವರ್ಷಗಳಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಭಿಮಾನ ಮತ್ತು ಗೌರವದ ಜೊತೆಗೆ ಕ್ಷೇತ್ರದ ಮೇಲಿನ ಭಕ್ತಿಯಿಂದ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಅಲಂಕಾರ ಸೇವೆ ನೀಡುತ್ತಾ ಬಂದಿದ್ದಾರೆ. ಈ ವರ್ಷ ಸುಮಾರು 15 ಲೋಡಿನಷ್ಟು ಅಲಂಕೃತ ಸಾಮಗ್ರಿಗಳನ್ನು ಬಳಸಲಾಗಿದೆ. ಹಣ್ಣು-ಹಂಪಲು, ವಿವಿಧ ಬಗೆಯ ಅಲಂಕೃತ ಪುಷ್ಪಗಳು, ತರಕಾರಿ ಸೇರಿ 5 ಲೋಡ್ ವಸ್ತುಗಳನ್ನು ಬಳಸಿಕೊಂಡು ದೇಗುಲದ ಮುಂಭಾಗ, ಒಳಾಂಗಣ, ಗರ್ಭಗುಡಿ, ಕಂಬಗಳು,ಹೆಗ್ಗಡೆಯವರ ನಿವಾಸ, ಅನ್ನಪೂರ್ಣ ಛತ್ರ ಮುಂತಾದ ಸ್ಥಳಗಳನ್ನು ಶೃಂಗರಿಸಲಾಗಿದೆ. ಕಲ್ಲಂಗಡಿ ಹಣ್ಣು, ಕಬ್ಬು, ಕಿತ್ತಾಳೆ, ತೆಂಗಿನಕಾಯಿ, ಸೇಬು ಮುಂತಾದ ಹಣ್ಣುಗಳನ್ನು ಬಳಸಿಕೊಂಡು 90 ಜನ 5 ದಿನದಲ್ಲಿ ನಿರಂತರವಾಗಿ ಅಲಂಕಾರ ನಡೆಸಿದ್ದಾರೆ. ಹೊಸ ವರ್ಷದ ಪ್ರಯುಕ್ತ ಧರ್ಮಸ್ಥಳಕ್ಕೆ ಭಕ್ತರ ಪ್ರವಾಹವೇ ಹರಿದು ಬರುತ್ತಿದೆ.
Join The Telegram | Join The WhatsApp |