
ಬಜಪೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಬಜಪೆ ವತಿಯಿಂದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಅಡ್ಯಾರು ಪದವು_ ಮಂಗಳೂರು, ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂಪಾಯಿ ಎರಡು ಲಕ್ಷ ಅನುದಾನ ಮಂಜೂರಾಗಿರುತ್ತದೆ. ಇದರ ಮಂಜೂರಾತಿ ಡಿ ಡಿ ಯನ್ನು ಬಜಪೆ ತಾಲೂಕಿನ ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ ರವರು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಭಟ್ ,ಆಡಳಿತ ಮಂಡಳಿಯ ಗೌರವಾಧ್ಯಕ್ಷರು ರಾಜರತ್ನ ,ಸುನಿಲ್ ಜಪ್ಪು ಅಧ್ಯಕ್ಷ ಮನೋಜ್ ಪೂಜಾರಿ , ಶ್ರವಣ್ ಶೆಟ್ಟಿ ಮೊಗರು ಗುತ್ತು , ಸುಜಿತ್ ಕುಮಾರ್, ಶ್ರೀ ಗೌರವ ಡಿ ಶೆಟ್ಟಿರವರಿಗೆ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ್ ಸುವರ್ಣ , ಶಂಕರ್ ಪೂಜಾರಿ, ಜಯಂತ್ ಕುಮಾರ್ , ವಲಯದ ಮೇಲ್ವಿಚಾರಕಿ ಸುಜಾತ,, ಸೇವಾ ಪ್ರತಿನಿಧಿ ವಜ್ರಾಕ್ಷಿ ,ಸತ್ಯಾಕ್ಷಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.