ಬೀಜಿಂಗ್ : ಒಮ್ಮೆ ಮಧುಮೇಹ ಬಂತೆಂದರೆ ಮುಗಿಯಿತು. ಅದು ಗುಣವಾಗುವುದಿಲ್ಲ. ಜೀವನ ಪರ್ಯಂತ ಕಾಡುತ್ತದೆ. ಆದರೆ ಸುಖೀ ಜೀವನ ನಡೆಸಲು ಅದನ್ನು ನಿಯಂತ್ರಿಸಬೇಕಷ್ಟೇ.

ಆದರೆ ಚೀನಾದ ಸಂಶೋಧಕರು ಮಧುಮೇಹಕ್ಕೆ ಸಂಬಂಧಿಸಿದಂತೆ ತಾವು ಅದ್ಭುತ ಸಂಶೋಧನೆ ಮಾಡಿರುವುದಾಗಿ ಘೋಷಿಸಿ ಕೊಂಡಿದ್ದಾರೆ. ‘ಸೆಲ್ ಥೆರಪಿ’ ಮೂಲಕ ಮೊಟ್ಟ ಮೊದಲ ಬಾರಿ ಮಧು ಮೇಹ ಚಿಕಿತ್ಸೆ ನೀಡಿ ರೋಗಿಯೊಬ್ಬನನ್ನು ಸಂಪೂರ್ಣ ಗುಣಮುಖ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

2021ರಲ್ಲಿ ವ್ಯಕ್ತಿಯೊಬ್ಬನಿಗೆ ‘ಕೋಶಗಳ ಕಸಿ’ (ಸೆಲ್ ಟ್ರಾನ್ಸ್‌ಪ್ಲಾಂಟ್) ಮಾಡ ಲಾಗಿತ್ತು. ಒಂದೇ ವರ್ಷದಲ್ಲಿ, ಅಂದರೆ 2022ರಿಂದ ಆತ ‘ಔಷಧ ಮುಕ್ತ’ ವ್ಯಕ್ತಿ ಆಗಿಬಿಟ್ಟಿದ್ದಾನೆ. ಮಧುಮೇಹಕ್ಕೆ ಈ ರೀತಿ ಸೆಲ್ ಕಸಿ ರಾಮಬಾಣ ದಂತಿದ್ದು, ಸಂಪೂರ್ಣ ಗುಣಪಡಿಸ ಬಹುದು ಎಂದು ಸಾಬೀತಾಗಿದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.