Join The Telegram | Join The WhatsApp |
ಬೆಂಗಳೂರು-
ಕರ್ನಾಟಕ ಹಾಲು ಮಹಾಮಂಡಳವು ಹೊಸ ವರ್ಷ, ಕ್ರಿಸ್ಮಸ್ ಹಾಗೂ ಸಂಕ್ರಾಂತಿ ಹಬ್ಬ ಪ್ರಯುಕ್ತ ‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ಶೇಕಡ 20ರಷ್ಟು ರಿಯಾಯಿತಿ ಪ್ರಕಟಿಸಿದೆ.
ಕೊಡುಗೆಯು ಡಿಸೆಂಬರ್ 19ರಿಂದ ಒಂದು ತಿಂಗಳ ಕಾಲ ರಾಜ್ಯದ ಎಲ್ಲೆಡೆ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ
ನಂದಿನಿ’ ಸಿಹಿ ಉತ್ಪನ್ನಗಳಾದ ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ವಿವಿಧ ಬರ್ಫಿಗಳು, ಕುಂದಾ, ಜಾಮೂನ್, ರಸಗುಲ್ಲಾ, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಕುಕೀಸ್ ಮತ್ತು ಇತರ ಎಲ್ಲ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ 20ರಷ್ಟು ರಿಯಾಯಿತಿ ಸಿಗಲಿದೆ.
ಹೊಸದಾಗಿ ಬಿಡುಗಡೆ ಮಾಡಿರುವ ಖೋವಾ ಬಾದಾಮ್ ರೋಲ್, ಖೋವಾ ಚಾಕೋನಟ್ಟಿ ರೋಲ್, ಗೋಡಂಬಿ ರೋಲ್, ಬೆಲ್ಲದ ಬರ್ಫಿ, ಕಲಾಕಂದ್, ಬೋವಾ ಲಾಡು, ಕರದಂಟು, ಅಕ್ಕಿ ಪಾಯಸ ಮಿಶ್ರಣ, ಗುಡ್‌ಲೈಫ್ ಚಾಕೊಲೇಟ್ ಗಿಫ್ಟ್ ಬಾಕ್ಸ್ ಉತ್ಪನ್ನಗಳಿಗೂ ಶೇ 20ರಷ್ಟು ರಿಯಾಯಿತಿ ಇರಲಿದೆ.
Join The Telegram | Join The WhatsApp |