ಬೆಳಗಾವಿ: ಎಸ್. ಕೆ. ಇ. ಸಂಸ್ಥೆಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಯುಥ್ ರೆಡ್ ಕ್ರಾಸ್ ವತಿಯಿಂದ ಕಾಲೇಜಿನ ಆವರಣದಲ್ಲಿ ಇದೇ ದಿನಾಂಕ ೨-೪-೨೦೨೪ ಮಂಗಳವಾರದಂದು ವಿವಿಧ ತಳಿಯ ಅಕ್ಕಿ ಹಾಗೂ ಸಿರಿಧಾನ್ಯಗಳನ್ನು (ಸಾವಯವ) ಮಾರಾಟಕ್ಕೆ ಇಡಲಾಗುವದು. ಸಾವಯವ ಕೃಷಿಕ ಶಂಕರ ಲಂಗಟಿಯವರು ಇದನ್ನು ಏರ್ಪಡಿಸುವರು. ಸಂಪೂರ್ಣ ಸಾವಯವ ಕೃಷಿಯಿಂದ ತಯಾರಿಸಿದ, ಯಾವುದೇ ಫಾಲೀಶ್ ಇಲ್ಲದ ಅಕ್ಕಿ ಹಾಗೂ ಧಾನ್ಯಗಳ ಮಾರಾಟ ನಡೆಯುವದು. ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ. ಸಮಯ ಬೆಳಗ್ಗೆ 10-2 ವರೆಗೆ ಇದ್ದು, ಮಾಹಿತಿಗೆ ಮೊಬೈಲ್ ಸಂಖ್ಯೆ :9449260694 ಇಲ್ಲಿಗೆ ಸಂಪರ್ಕಿಸಬಹುದು.