ಬೆಳಗಾವಿ : ಬೆಳಗಾವಿ ನಗರದ ಉತ್ಸವ ಪಂಪ್ ಹೌಸ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯವಿರುವುದರಿಂದ ಆ.29 ರಂದು ಬೆಳಗಾವಿ ದಕ್ಷಿಣ ಭಾಗದ ಕೆಲವು ಕಡೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.
ನಿತ್ಯಾನಂದ ಕಾಲೋನಿ, ಶಿವಾಜಿ ಕಾಲೋನಿಯ 1 & 2ನೇ ಕ್ರಾಸ್, ಗುರುಪ್ರಸಾದ ಕಾಲೋನಿ,
ಸ್ವಾಮಿನಾಥ್ ಕಾಲೋನಿ, ಅರ್ಜುನ ಕಾಲೋನಿ, ಶಿವಾಜಿ ರಸ್ತೆಯ 4 ನೇ & 7ನೇ ಕ್ರಾಸ್ ಮತ್ತು ಹಳೇ ಪಾರ್ವತಿ
ನಗರದಲ್ಲಿ ನೀರು ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆ.ಯು.ಐ.ಡಿ.ಎಫ್.ಸಿಯ ಅಧೀಕ್ಷಕ
ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.