ಯಡಮೊಗೆ : ಯಡಮೊಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 23 ವಿದ್ಯಾರ್ಥಿಗಳಿಗೆ ಹೊಸ ಕಿರಣ ನ್ಯೂಸ್ ಚಾನೆಲ್ ವತಿಯಿಂದ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕವನ್ನು ಸಂಪಾದಕ ಕಿರಣ್ ಪೂಜಾರಿ ವಿತರಿಸಿದರು. ಮುಖ್ಯೋಪಾಧ್ಯಾಯ ಮಲ್ಲೇಶ್ ಎಚ್, ಎಸ್ಡಿಎಂಸಿ ಅಧ್ಯಕ್ಷ ರತ್ನಾಕರ್ ಎಚ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಸದಸ್ಯರಾದ ಪ್ರವೀಣ್ ಮರಕಾಲ ಮತ್ತು ದೀಪಕ್ ಉಪಸ್ಥಿತರಿದ್ದರು. ಶಿಕ್ಷಕಿ ಸ್ವಪ್ನ ನಿರೂಪಿಸಿದರು.