ಬೆಳಗಾವಿ : 2023 ನೇ ಸಾಲಿನಲ್ಲಿ ಸರ್ಕಾರವು ಬೆಳಗಾವಿ ತಾಲೂಕನ್ನು  ಬರಪೀಡಿತ ತಾಲೂಕು ಎಂದು ಘೋಷಿಸಿದ್ದು, ಸರ್ಕಾರದಿಂದ ಅರ್ಹ ರೈತ ಫಲಾನುಭವಿಗಳಿಗೆ ಬೆಳೆಹಾನಿ
ಪರಿಹಾರವನ್ನು ನೀಡಲು ಘೋಷಿಸಿದೆ.

ಬೆಳಗಾವಿ ತಾಲೂಕಿನ್ನು ಮುಂಗಾಮಿನ ವೈಫಲ್ಯ ಮತ್ತು ಮಳೆ ಕೊರತೆಯಿಂದ ಬರಪೀಡಿತ ರೈತರಿಗೆ
ಹಂತ ಹಂತವಾಗಿ ರೈತನ ಬ್ಯಾಂಕ್ ಖಾತೆಯ ಟಿಬಿಟಿ ಮೂಲಕ ನೇರವಾಗಿ ಬೆಳೆಹಾನಿ ಪರಿಹಾರ ಹಣವನ್ನು ಜಮೆ
ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗಲು ಬೆಳಗಾವಿಯ ರಿಸಾಲ್ದಾರಗಲ್ಲಿಯ ತಹಶೀಲ್ದಾರ
ಕಾರ್ಯಾಲಯದ ಒಂದನೇ ಮಹಡಿಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಸಹಾಯವಾಣಿ
೦೮೩೧೨೪೦೭೨೮೬ ಸಂಖ್ಯೆಗೆ ಸಾರ್ವಜನಿಕರು ಏನಾದರೂ ಕುಂದುಕೊರತೆಗಳಿದ್ದಲ್ಲಿ ಸಂಪರ್ಕಿಸಬಹುದು.
ಪ್ರತಿದಿನ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫.೩೦ ರವರೆಗೆ ಸಂಪರ್ಕಿಸಿ ಸೂಕ್ತ ಪರಿಹಾರ
ಪಡೆದುಕೊಳ್ಳಬಹುದು ಎಂದು ಬೆಳಗಾವಿಯ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.