
ಪಾವಂಜೆ : ಶ್ರೀ ಕ್ಷೇತ್ರ ಧರ್ಮಸ್ಥಳ, ಸಮುದಾಯ ವಿಭಾಗದಿಂದ ದೇವಾಡಿಗ ಸಮಾಜ ಸೇವಾ ಸಂಘ (ರಿ )ಪಾವಂಜೆ, ಹಳೆಯಂಗಡಿ. ಸಂಘದ, ನೂತನ ಕಟ್ಟಡಕ್ಕಾಗಿ ಅನುದಾನ ವಿತರಣಾ ಕಾರ್ಯಕ್ರಮ ನೆರವೇರಿತು. ಮುಲ್ಕಿ ಸೀಮೆ ಅರಸರಾದ ಪೂಜ್ಯ ಶ್ರೀ ದುಗ್ಗಣ್ಣ ಸಾವಂತರು 3 ಲಕ್ಷ ಅನುದಾನವನ್ನು ದೇವಾಡಿಗ ಸಂಘಕ್ಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಬಜಪೆ ಯೋಜನಾ ಕಚೇರಿಯ ಯೋಜನಾಧಿಕಾರಿ ಗಿರೀಶ್, ಜನ ಜಾಗೃತಿ ವೇದಿಕೆ ಅಧ್ಯಕ್ಷರು ವಿನೋದ್ ಬೊಲ್ಲೂರ್, ಮೂಲ್ಕಿ ವಲಯದ ಅಧ್ಯಕ್ಷರು ಪುಷ್ಪರಾಜ್,ಮೂಲ್ಕಿ ವಲಯದ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ ಮತ್ತು ಹಳೆಯಂಗಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ, ಯಾದವ್ ದೇವಾಡಿಗ ಕಟ್ಟಡ ಸಮಿತಿ ಕಾರ್ಯಧ್ಯಕ್ಷ ,ಶ್ರೀ ಪರಮೇಶ್ವರ್ ಕಟ್ಟಡ ಸಮಿತಿ ಅಧ್ಯಕ್ಷ,ದೇವಾಡಿಗ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ದನ,ಕಾರ್ಯದರ್ಶಿ ಮಂಜುಳಾ ಶುಭ್ರತ್ ಉಪಸ್ಥಿತರಿದ್ದರು.