ಇನ್ನು ಮುಂದೆ ಪ್ರತಿ ಅಮಾವಾಸ್ಯೆಯಂದು ಏನಾದರೂ ಒಂದು ಕಾರ್ಯಕ್ರಮವನ್ನು ಇಟ್ಟುಕೊಳ್ಳೋಣ ಎಂದು ಬಸವರಾಜ ರಾಮಣ್ಣವರ ತಿಳಿಸಿದರು. ನವೀಕರಣ ಮಾಡಿಕೊಳ್ಳಬೇಕಾಗಿರುವ ಇನ್ನುಳಿದ ಎಲ್ಲ ಸಂಘದ ಸದಸ್ಯರು ಆದಷ್ಟು ಬೇಗನೆ ನವೀಕರಿಸಿಕೊಳ್ಳಬೇಕಾಗಿ ವಿನಂತಿಸಿದ ಅವರು, ಸಂಘಕ್ಕೆ ಹೊಸದಾಗಿ ಸೇರ್ಪಡೆಗೊಳ್ಳ ಬಯಸಿದ ಛಾಯಾಗ್ರಾಹಕರೆಲ್ಲರೂ ರಾಮಣ್ಣವರ ಲ್ಯಾಬ್ ಗೆ ಸಂಪರ್ಕಿಸಿ (9448136225) ಸಂಪರ್ಕಿಸಬಹುದು ಎಂದು ಹೇಳಿದರು.
ಬೆಳಗಾವಿ :
ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಐಡಿ ಕಾರ್ಡುಗಳನ್ನು ಸದಾಶಿವ ನಗರದ ಸಂಘದ ಕಚೇರಿಯಲ್ಲಿ ಹಿರಿಯ ಹಾಗೂ ಅನುಭವಿ ಛಾಯಾಗ್ರಾಹಕ ಅಮೃತ್ ಚರಂತಿಮಠ ಅವರು ಸಂಘದ ನೋಂದಾಯಿತ ಸದಸ್ಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಈ ಐಡಿ ಕಾರ್ಡ್ ಗಳನ್ನು ಧರಿಸಿಕೊಂಡು ಹೋಗಬೇಕು ಹಾಗೂ ರಾತ್ರಿ ಹೊತ್ತು ಹೋದಾಗ ಪೊಲೀಸರಿಂದ ವಿಚಾರಣೆಗೊಳಪಟ್ಟಾಗ ಈ ಐಡಿ ಕಾರ್ಡ್ ಗಳನ್ನು ತೋರಿಸುವುದು ಅತ್ಯಂತ ಮುಖ್ಯವಾದ ಕೆಲಸ. ಇಂದಿನ ದಿನಮಾನದಲ್ಲಿ ಹೊಸ ಹೊಸ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ಅಳವಡಿಸಿಕೊಂಡು ನಮ್ಮ ಫೋಟೋಗ್ರಫಿ ವಿಷಯದಲ್ಲಿ ಎಲ್ಲರೂ ಮುಂದೆ ಬರಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ,ಭಕ್ತಿ , ನಯ-ವಿನಯ ಇರಬೇಕು, ನಮ್ಮ ಗ್ರಾಹಕರಿಗೆ ಖುಷಿಯಾಗುವಂತೆ ಒಳ್ಳೆಯ ಆಲ್ಬಮ್ ತಯಾರಿಸಿ ಕೊಡಬೇಕು ಮತ್ತು ಸರಿಯಾಗಿ ನಿಗದಿತ ಸಮಯಕ್ಕಿಂತ ಮುಂಚೆ ಅವರಿಗೆ ತಲುಪಿಸಿದರೆ ಗ್ರಾಹಕರು ಅತ್ಯಂತ ಖುಷಿ ಪಡುತ್ತಾರೆ. ಛಾಯಾಗ್ರಾಹಕರು ತಮಗೆ ಆಸಕ್ತಿ ಇದ್ದ ವಿಷಯದ ಬಗ್ಗೆ ಹೆಚ್ಚಾಗಿ ಅಭ್ಯಾಸ ಮಾಡಿ ಇತರರಿಗೆ ತಿಳಿಸುವಷ್ಟು ಶಕ್ತರಾಗಬೇಕು ಎಂದು ಹೇಳಿದರು.
ಮಾಜಿ ಅಧ್ಯಕ್ಷ ಸತೀಶ ಶೆಟ್ಟಿ ಮಾತನಾಡಿ, ಛಾಯಾಗ್ರಾಹಕರು ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಹಾಗೂ ಗ್ರಾಹಕರೊಂದಿಗೆ ಹೇಗೆ ಮಾತನಾಡಬೇಕು. ಅತೀ ಶಿಸ್ತಿನಿಂದ ವರ್ತಿಸುವುದನ್ನು ನಾವು ಕಲಿಯಬೇಕು. ಇದರಿಂದ ನಮಗೆ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಆಗ ನಮ್ಮನ್ನು ಸಮಾಜ ಗುರುತಿಸುತ್ತದೆ ಎಂದು ಹೇಳಿದರು.
ಸಂಘದ ಸದಸ್ಯ ರಿತೇಶ ಒಕ್ಕಲಗೌಡ ಹಾಗೂ ರಾಜು ಮುಚ್ಚಂಡಿ, ಮಿನಾಜ ಬಾದಾಮಿ, ಮಂಜುನಾಥ ಕುಂದರಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷ ಬಸವರಾಜ ರಾಮಣ್ಣವರ ಅಧ್ಯಕ್ಷೀಯ ಸಮಾರೋಪ ಭಾಷಣದಲ್ಲಿ ಸಂಘದ ಐಡಿ ಕಾರ್ಡ್ ಪ್ರಾಮುಖ್ಯತೆ ಬಗ್ಗೆ ಹೇಳಿದರು. ನಮ್ಮ ಜಿಲ್ಲಾ ಸಂಘವು ರಾಜ್ಯ ಸಂಘದ ಸದಸ್ಯತ್ವ ಪಡೆದಿದೆ. ಈ ಐಡಿ ಕಾರ್ಡ್ ಗಳು ರಾಜ್ಯಾದ್ಯಂತ ಮಾನ್ಯತೆ ಹೊಂದಿವೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಬೇರೆ ಬೇರೆ ಕಾರ್ಯಾಗಾರಗಳನ್ನು ಪ್ರಸಿದ್ಧ ಹಾಗೂ ಅನುಭವಿಗಳಿಂದ ನಡೆಸಲಾಗುವುದು, ಕಾರಣ ಎಲ್ಲಾ ಛಾಯಾಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಗುರುತಿನ ಕಾರ್ಡುಗಳನ್ನು ವಿತರಿಸುವ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರು ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಸಂಘದ ಕಾರ್ಯದರ್ಶಿ ಪ್ರಕಾಶ ಕಳಸದ ನಿರೂಪಿಸಿ ವಂದಿಸಿದರು.