ಬಜಪೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಜಪೆ ತಾಲೂಕು
ಬಜಪೆ ವಲಯದ ಜೋಕಟ್ಟೆ ಕಾರ್ಯಕ್ಷೇತ್ರದ ಪೇಜಾವರ ಮೊಗರುಗಿರಿ (ಗುಡ್ಡೆ ) ಶ್ರೀ ಮಹದೇವ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರದಿಂದ 1,00,000 ರೂಪಾಯಿ ಮೊತ್ತ ಡಿ ಡಿ ಬಂದಿದ್ದು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ಪೇಜಾವರ ದೇವಸ್ಥಾನ ಆಡಳಿತ ಮುಖ್ಯಸ್ಥರು, ಶಿವಪ್ಪ ಶೆಟ್ಟಿ ಊರಿನ ಗುತ್ತಿನಾರು ಅಶ್ವಥ್ ಭಟ್ ಹಾಗೂ ನವೀನ್ ಶೆಟ್ಟಿ ಸದಸ್ಯರು, ಮಾನ್ಯ ಯೋಜನಾಧಿಕಾರ ಗಿರೀಶ್, ಒಕ್ಕೂಟದ ಪದಾಧಿಕಾರಿಗಳು,ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು.