Join The Telegram | Join The WhatsApp |
ಬೆಳಗಾವಿ :
ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಜೀತ ಪದ್ಧತಿ ಪ್ರಕರಣಗಳು ಕಂಡುಬಂದಿಲ್ಲ, ಒಂದುವೇಳೆ ಅಂತಹ ಪ್ರಕರಣಗಳು ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದರೆ ಕೂಡಲೇ ಅವರನ್ನು ರಕ್ಷಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿದ್ದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜ.11) ನಡೆದ ಜಿಲ್ಲಾ ಮಟ್ಟದ ಜೀತ ಜಾಗೃತಿ-ನಿರ್ಮೂಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮೊದಲು ಜಿಲ್ಲೆಯಲ್ಲಿ ತಾಲೂಕಿನಲ್ಲಿ ಜೀತ ಪದ್ಧತಿಗಳು ಪ್ರಕರಣಗಳು ಕಂಡು ಬಂದಿದ್ದು, ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ಕೋರ್ಟ್ ಆದೇಶದ ನಂತರ ಅಂತವರಿಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಜೀತ ಪದ್ಧತಿ ಪ್ರಕರಣಕ್ಕೆ ಸಂಬಂಧಿತ ಆಪಾದನೆ ಇರುವ ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋದ ಕಾರಣ ಪ್ರಕರಣಗಳು ಕೋರ್ಟ್ ಹಂತದಲ್ಲಿ ಇತ್ಯರ್ಥವಾಗಲಿವೆ. ಅದೇ ರೀತಿಯಲ್ಲಿ ನ್ಯಾಯಾಲಯ ವಿಚಾರಣೆ ವೇಳೆ ಭೂ ಮಾಲೀಕರು ಹಾಗೂ ಜೀತ ವ್ಯಕ್ತಿ ಒಂದೆ ಸ್ಥಳದಲ್ಲಿ ತನಿಖೆ ಮಾಡದಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈಗಾಗಲೇ ಹೈ ಕೋರ್ಟ್ ತಡೆಯಾಜ್ಞೆ ತಂದ ಕಾರಣ ಸದ್ಯದ ಮಟ್ಟಿಗೆ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಈ ಕುರಿತು ಸಂಬಂಧಿತ ಉಪ ವಿಭಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಕೋರ್ಟ್ ಆದೇಶದ ಪ್ರಕಾರ ಪರಿಹಾರ ನೀಡಲಾಗುವದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಕರ್ನಾಟಕ ಲಾಟರಿ, ಮಟಕಾ ನಿಷೇಧ ಕಾಯ್ದೆ ಸಭೆ:
ಹೊರ ರಾಜ್ಯದಿಂದ ಅನಧಿಕೃತ ಲಾಟರಿ ಮತ್ತು ಮಟಕಾ ಹಾವಳಿ ಹೆಚ್ಚಾಗಿವೆ, ಇಂತಹ ಅನಧಿಕೃತ ಚಟುವಟಿಕೆಗಳಿಗೆ ವಾಣಿಜ್ಯ ಇಲಾಖೆಯ ಸಹಯೋದೊಂದಿಗೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಈ ಮೊದಲು ಅನಧಿಕೃತ ಲಾಟರಿ, ಮತ್ತು ಮಟಕಾ ದಾಳಿ ನಡೆಸಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಲಾಟರಿಯ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ, ಹೀಗಾಗಿ ಮಟಕಾ ಪ್ರಕರಣಗಳು ಹೆಚ್ಚಿವೆ ಇದಕ್ಕೆ ನಿರಂತರ ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಅನಧಿಕೃತ ಲಾಟರಿ, ಮತ್ತು ಮಟಕಾ ಸೂಪರ್ಡೆಂಟ್ ಸಿಮಾಂಜಿ ಗೌಡರ, ಪೊಲೀಸ್ ಇಲಾಖೆ ಹಾಗೂ ವಿವಿಧ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Join The Telegram | Join The WhatsApp |