
ಉಳ್ಳಾಲ: ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಮಂಗಳ ಸಭಾಂಗಣದಲ್ಲಿ ಫೆ.21 ಮತ್ತು 22ರಂದು 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಭಾಕರ ಶಿಶಿಲ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ 13 ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಯನ್ನು ಸನ್ಮಾನಿಸಲಾಗುವುದು.
ಉಡುಪಿಯ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪಾವೂರು, ಕಾದಂಬರಿಕಾರ ಪ್ರಭಾಕರ ನೀರುಮಾರ್ಗ, ಸಾಮಾಜಿಕ ಮುಖಂಡ ವೆಂಕಪ್ಪ ಕಾಜವ ಮಿತ್ತಕೋಡಿ, ಕಲಾವಿದ ಎಂ.ಜಿ.ಕಜೆ, ಲೇಖಕ ಪರಮಾನಂದ ಸಾಲಿಯನ್, ಧನಂಜಯ ಮೂಡಬಿದಿರೆ; ಮೋನಪ್ಪ, ಪುತ್ತೂರು, ಪ್ರೇಮಾಗೌಡ, ಕಡಬ; ಶಶಿಕುಮಾರ್ ಭಟ್ ಪಡಾರು, ಜಲ ಸಂಧನ ತಜ್ಞ ಜೋಸೆಫ್ ಎನ್, ಮಹಮ್ಮದ್ ಕುಂ ಅವರು ತೊಕ್ಕೊಟ್ಟು, ಸಬಿತಾ ಕೊರಗ, ಅನುವಾದಕ ಪಯ್ಯನ್ನೂರು ಕುಂಞ್ಚಿರಾಮನ್ ಮಾಸ್ತರ್, ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸನ್ಮಾನಿಸಲಾಗುವುದು ಎಂದು ಕಸಾಪ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ, ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.